April 2, 2026
Thursday, April 2, 2026
spot_img

CINE | ‘ರಾಜಾ ಶಿವಾಜಿ’ ಪಾತ್ರದಲ್ಲಿ ಘರ್ಜಿಸಿದ ರಿತೇಶ್ ದೇಶ್‌ಮುಖ್: ಹೇಗಿದೆ ಗೊತ್ತಾ ಟೀಸರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಇತಿಹಾಸದಲ್ಲಿ ಅಪ್ರತಿಮ ಯೋಧನಾಗಿ ಗುರುತಿಸಿಕೊಂಡಿರುವ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಕಥೆ ಈಗ ಭರ್ಜರಿ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಬಹುನಿರೀಕ್ಷಿತ ‘ರಾಜಾ ಶಿವಾಜಿ’ ಚಿತ್ರದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದೆ.

ನಟ ರಿತೇಶ್ ದೇಶ್‌ಮುಖ್ ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದು, ಟೀಸರ್‌ನಲ್ಲಿ ಯುದ್ಧದ ದೃಶ್ಯಗಳು, ಸ್ವರಾಜ್ಯದ ಹೋರಾಟ ಮತ್ತು ಶಿವಾಜಿ ಮಹಾರಾಜರ ಶೌರ್ಯವನ್ನು ಅದ್ದೂರಿಯಾಗಿ ತೋರಿಸಲಾಗಿದೆ.

ಚಿತ್ರದಲ್ಲಿ ಸಂಜಯ್ ದತ್ ಅಫ್ಜಲ್ ಖಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಷೇಕ್ ಬಚ್ಚನ್ ಸಂಭಾಜಿ ಶಹಾಜಿ ಭೋಸಲೆ ಪಾತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ವಿದ್ಯಾ ಬಾಲನ್, ಜೆನಿಲಿಯಾ ದೇಶ್‌ಮುಖ್, ಭಾಗ್ಯಶ್ರೀ, ಫರ್ದೀನ್ ಖಾನ್ ಮತ್ತು ಬೋಮನ್ ಇರಾನಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ:

ಈ ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಶಿವಾಜಿ ಮಹಾರಾಜರ ವಿಶ್ವಾಸಾರ್ಹ ಯೋಧ ಜೀವಾ ಮಹಾಲಾ ಪಾತ್ರದಲ್ಲಿ ಅವರ ಎಂಟ್ರಿ ಚಿತ್ರಕ್ಕೆ ಇನ್ನಷ್ಟು ಕುತೂಹಲ ಮೂಡಿಸಿದೆ.

‘ಜಿಯೋ ಸ್ಟುಡಿಯೋಸ್’ ಮತ್ತು ಮುಂಬೈ ಫಿಲ್ಮ್ ಕಂಪನಿ ನಿರ್ಮಾಣದ ಈ ಸಿನಿಮಾ ಮೇ 1ರಂದು ಮರಾಠಿ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆಯಾದ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !