ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಬರ್ಟ್ ಚಿತ್ರದಲ್ಲಿ ಜನ ಮೆಚ್ಚುಗೆಯಾಗಿದ್ದ ಸೋನಲ್ ಮೊಂಥೆರೋ ವಿನೋದ್ ಪ್ರಭಾಕರ್ ಜೋಡಿ ಈಗ ಮತ್ತೊಮ್ಮೆ ಜೊತೆಯಾಗಲಿದ್ದಾರೆ. ಅದುವೇ ಮಾದೇವ ಚಿತ್ರದ ಮೂಲಕ.
80 ಕಾಲಘಟ್ಟದ ಕಥೆ ಇರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹ್ಯಾಂಗ್ ಮ್ಯಾನ್ ರೋಲ್ ಮಾಡಿದ್ದಾರೆ. ಈ ರೋಲ್ ಇವರ ಜೀವನದಲ್ಲಿ ಫಸ್ಟ್ ಟೈಮ್ ಅನ್ನೋ ಖುಷಿನೂ ಇವರಲ್ಲಿದೆ. ಇಲ್ಲಿವರೆಗೂ ಹ್ಯಾಂಗ್ ಮ್ಯಾನ್ ಮೇಲೆ ಕನ್ನಡದಲ್ಲಿ ಯಾವುದೇ ಚಿತ್ರ ಬಂದಿಲ್ಲ ಅನ್ನೋದನ್ನು ಕೂಡ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ.
ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ. ನಟ ಶ್ರೀನಗರ ಕಿಟ್ಟಿ ಕೂಡ ಈ ಸಿನಿಮಾದಲ್ಲಿದ್ದಾರೆ.ಜೊತೆಗೆ ಶೃತಿ, ಅಚ್ಯುತ ಕುಮಾರ್, ಕಾಕ್ರೋಜ್ ಸುಧೀ, ಮೈಕೋ ನಾಗರಾಜ್, ಬಲ ರಾಜ್ವಾಡಿ ಸಹ ಅಭಿನಯಿಸಿದ್ದಾರೆ.
ಮಾದೇವ ಚಿತ್ರದಲ್ಲಿ ಸಖತ್ ಆ್ಯಕ್ಷನ್‌ಗಳೂ ಇವೆ. ಮೂವರು ಸಾಹಸ ನಿರ್ದೇಶನದ ಮಾಡಿದ್ದಾರೆ. ಬಾಲಕೃಷ್ಣ ತೋಟ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.