ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದ ಬಹುನಿರೀಕ್ಷಿತ ‘ತಬಾಹಿ’ ಪೂರ್ಣ ಪ್ರಮಾಣದ ವಿಡಿಯೋ ಸಾಂಗ್ ಇದೇ ವಾರಾಂತ್ಯದಲ್ಲಿ ಅಧಿಕೃತವಾಗಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆ ರಿಲೀಸ್ ಆಗಿದ್ದ ಲಿರಿಕಲ್ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿತ್ತು. ಈಗ ಅಸಲಿ ವಿಡಿಯೋ ಝಲಕ್ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ
ಗಾಂಧಿನಗರದ ಟ್ರೆಂಡ್ಸ್ ಪ್ರಕಾರ, ಈ ಹಾಡಿನಲ್ಲಿ ಯಶ್ ಹಾಗೂ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಡುವಿನ ಕೆಮಿಸ್ಟ್ರಿ ಸಖತ್ ಬೋಲ್ಡ್ ಹಾಗೂ ಅದ್ಧೂರಿಯಾಗಿ ಮೂಡಿಬಂದಿದೆ. ಹಾಡಿನ ವಿಶುವಲ್ಸ್ ಮತ್ತು ಮೇಕಿಂಗ್ ಸ್ಟೈಲ್ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬ ನೀಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಕಿಯಾರಾ ಜೊತೆಗೆ ನಟಿ ರುಕ್ಮಿಣಿ ವಸಂತ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಆಗಸ್ಟ್ 26ಕ್ಕೆ ವರ್ಲ್ಡ್ ವೈಡ್ ಗ್ರಾಂಡ್ ರಿಲೀಸ್
ಅಭಿಮಾನಿಗಳ ದೀರ್ಘಕಾಲದ ಕಾಯುವಿಕೆಗೆ ತೆರೆ ಬೀಳುತ್ತಿದ್ದು, ಆಗಸ್ಟ್ 26ರಂದು ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಚುರುಕುಗೊಳಿಸಿರುವ ಚಿತ್ರತಂಡ, ಈ ಬೋಲ್ಡ್ ವಿಡಿಯೋ ಸಾಂಗ್ ಮೂಲಕ ಬಾಕ್ಸ್ ಆಫೀಸ್ ಹೈಪ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದೆ.



