CINE | ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಸೈಯಾರಾ’! OTTಗೆ ಯಾವಾಗ? ಎಲ್ಲಿ ಸ್ಟ್ರೀಮಿಂಗ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುವ ನಟ ಅಹಾನ್ ಪಾಂಡೆ ಮತ್ತು ಅನಿತ್ ಪಡ್ಡಾ ಅವರ ಅಭಿನಯದ ಸಿನಿಮಾ ‘ಸೈಯಾರಾ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭವನ್ನು ಕಂಡು ಸಿನಿಪ್ರೇಮಿಗಳಿಗೆ ಆಶ್ಚರ್ಯವನ್ನೇ ಉಂಟುಮಾಡಿದೆ. ಬಿಡುಗಡೆಗೊಂಡ ಮೊದಲ ದಿನವೇ ಈ ಸಿನಿಮಾ 21 ಕೋಟಿ ಕಲೆಕ್ಷನ್ ಮಾಡಿದ್ದು, ಒಟ್ಟು 109 ಕೋಟಿ ಗಳಿಕೆಯನ್ನು ದಾಖಲಿಸಿದೆ. ಇದು ಚೊಚ್ಚಲ ನಟನಿಗೆ ಈ ಮಟ್ಟದ ಯಶಸ್ಸು ಸಿಗುವುದು ಅಪರೂಪ ಎನ್ನಲಾಗುತ್ತಿದೆ.

ಚಿತ್ರದ ನಿರ್ದೇಶನವನ್ನು ಮಾಡಿರುವ ಮೋಹಿತ್ ಸೂರಿಗೆ ಇದು ಅವರ ಕರಿಯರ್‌ನ ಅತ್ಯಂತ ಯಶಸ್ವಿ ಆರಂಭವಾಗಿದ್ದು, ಇದಕ್ಕೂ ಮೊದಲು ‘ಏಕ್ ವಿಲನ್’ ಮತ್ತು ‘ಆಶಿಕಿ 2’ ಚಿತ್ರಗಳಿಂದ ಅವರು ಗಮನ ಸೆಳೆದಿದ್ದರು. ಆದರೆ ‘ಸೈಯಾರಾ’ ಚಿತ್ರದ ಯಶಸ್ಸು ಅವರಿಗೆ ಹೊಸ ಹುಮ್ಮಸ್ಸು ನೀಡಿದೆ

ಸೈಯಾರಾ ಚಿತ್ರದ ಹಾಡುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಅವುಗಳ ಬಳಕೆ ಹೆಚ್ಚಾಗಿದೆ. ಇದು ಚಿತ್ರಕ್ಕೆ ಹೆಚ್ಚುವರಿ ಪಬ್ಲಿಸಿಟಿ ನೀಡಿದಂತಾಗಿದೆ.

ಈ ಮಧ್ಯೆ, ಈ ಸಿನಿಮಾ ಶೀಘ್ರದಲ್ಲೇ OTT ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಪ್ರಸಾರವಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ನೆಟ್‌ಫ್ಲಿಕ್ಸ್ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದ್ದು, ಚಿತ್ರ ಥಿಯೇಟರ್‌ನಲ್ಲಿ ಬಿಡುಗಡೆಯಾದ ಎರಡು ತಿಂಗಳ ಒಳಗೇ OTTಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!