CINE | ಶಿವರಾಜ್ ಕುಮಾರ್ – ದುನಿಯಾ ವಿಜಯ್ ಕಾಂಬಿನೇಷನ್ ಸಿನಿಮಾ ಪಕ್ಕಾ! ಆದರೆ ಡೈರೆಕ್ಟರ್ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕನ್ನಡ ಚಿತ್ರರಂಗದ ಸ್ಟಾರ್ ನಟ ಶಿವರಾಜ್ ಕುಮಾರ್ ದುನಿಯಾ ವಿಜಯ್ ಒಟ್ಟಿಗೆ ಸಿನಿಮಾ ಮಾಡುವ ಮಾತನ್ನು ಶಿವಣ್ಣ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಬಗ್ಗೆ ಅವರ ಮಾತುಗಳು ಸಿನಿಮಾ ಲವರ್ಸ್‌ಗೆ ನಿರೀಕ್ಷೆ ಹುಟ್ಟುಹಾಕಿದ್ದು, “ವಿಜಯ್ ಮತ್ತು ನಾನು ಒಟ್ಟಿಗೆ ಸಿನಿಮಾ ಮಾಡ್ತೀವಿ, ಪ್ಲಾನ್ ಇದೆ,” ಎಂದು ಹೇಳಿಕೊಂಡಿದ್ದಾರೆ

ಈ ವೇಳೆ ಪಕ್ಕದಲ್ಲೇ ಇದ್ದ ದುನಿಯಾ ವಿಜಯ್ ಸಹ ಮಂದಹಾಸ ಬೀರಿದ್ರು. ಸದ್ಯ ಅವರು ತಮ್ಮ ಮಕ್ಕಳ ಚಿತ್ರಗಳ ನಿರ್ದೇಶನದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈ ಚಿತ್ರ ಪೂರ್ಣವಾದ ನಂತರ ಶಿವಣ್ಣ-ವಿಜಯ್ ಕಾಂಬಿನೇಷನ್ ಸಿನಿಮಾ ಕೆಲಸ ಪ್ರಾರಂಭವಾಗಲಿದೆ.

ಡೈರೆಕ್ಷನ್ ಯಾರದು ಎಂಬ ಪ್ರಶ್ನೆಗೆ ದುನಿಯಾ ವಿಜಯ್ ಕೇವಲ ನಗು ಮಾತ್ರ ನೀಡಿದರು. ಈ ಮೂಲಕ ಚಿತ್ರಕ್ಕೆ ಅವರು ನಿರ್ದೇಶನ ಮಾಡುತ್ತಾರೋ ಎಂಬ ಕುತೂಹಲ ಹೆಚ್ಚಾಗಿದೆ. ಸ್ಟೈಲ್, ಕಥೆಯ ಆಯ್ಕೆ, ಮತ್ತು ಪ್ರಚಾರ ತಂತ್ರಗಳಲ್ಲಿ ವಿಭಿನ್ನವಾಗಿರುವ ದುನಿಯಾ ವಿಜಯ್ ಎಲ್ಲವನ್ನೂ ಮುಂಚಿತವಾಗಿ ಬಹಿರಂಗಪಡಿಸದೆ ಇರೋದು ಅವರ ಶೈಲಿ. ಆದ್ದರಿಂದ, ಈ ಚಿತ್ರ ಹೇಗಿರುತ್ತೆ ಎಂಬ ನಿರೀಕ್ಷೆ ಈಗಲೇ ಶುರುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!