CINE | OTTಯಲ್ಲೂ ಮಕಾಡೆ ಮಲಗಿದ ‘ಸಿಕಂದರ್’: ಸಲ್ಲು ಜೊತೆ ರಶ್ಮಿಕಾ ಕೆಮಿಸ್ಟ್ರಿ ಮ್ಯಾಚ್ ಆಗಲ್ಲ ಎಂದ ಅಭಿಮಾನಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

2025 ರ ಈದ್ ಸಂದರ್ಭದಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ‘ಸಿಕಂದರ್’ ಎರಡು ತಿಂಗಳ ನಂತರ, ಮೇ 25 ರಂದು,ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿತು.

ರಶ್ಮಿಕಾ ಮಂದಣ್ಣ ಅವರೊಂದಿಗೆ ಸಲ್ಲು ಮೊದಲ ಬಾರಿಗೆ ‘ಸಿಕಂದರ್’ ಚಿತ್ರದಲ್ಲಿ ಕಾಣಿಸಿಕೊಂಡರು. ಹೊಸ ಜೋಡಿಯ ಕೆಮಿಸ್ಟ್ರಿ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದರು.

ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾದ ತಕ್ಷಣ ಭಾರೀ ಟ್ರೋಲ್‌ಗಳಿಗೆ ಗುರಿಯಾಯಿತು. ಚಿತ್ರದಲ್ಲಿನ ನಟನ ಅಭಿನಯವನ್ನು ಜನರು ಟ್ರೋಲ್ ಮಾಡಿದರು. ಇಬ್ಬರ ಕೆಮಿಸ್ಟ್ರಿ ಮ್ಯಾಚ್ ಆಗಲ್ಲ ಎಂದು ಅಭಿಮಾನಿಗಳು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿವೆ.

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾಗ, ಬಳಕೆದಾರರೊಬ್ಬರು ಸಿಕಂದರ್ ಸಲ್ಮಾನ್ ಖಾನ್ ಅವರ ವೃತ್ತಿಜೀವನದಲ್ಲಿ ಇದುವರೆಗಿನ ಅತ್ಯಂತ ಕಳಪೆ ಚಿತ್ರ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!