ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ‘ಸೀತಾ ಪಯಣಂ’ ಸಿನಿಮಾ ಫೆಬ್ರವರಿ 14ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ.
ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ಅರ್ಜುನ್ ಅವರ ಮಗಳು ಐಶ್ವರ್ಯ ಅರ್ಜುನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿರಂಜನ್ ನಾಯಕನಾಗಿ ನಟಿಸಿದ್ದು, ಸತ್ಯರಾಜ್, ಪ್ರಕಾಶ್ ರಾಜ್, ಕೋವೈ ಸರಳ ಸೇರಿದಂತೆ ಹಲವು ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಧ್ರುವ ಸರ್ಜಾ ವಿಶೇಷ ಕ್ಯಾಮಿಯೋ ಮೂಲಕ ಚಿತ್ರಕ್ಕೆ ಇನ್ನಷ್ಟು ಮೆರಗು ನೀಡಿದ್ದಾರೆ.
ಇದನ್ನೂ ಓದಿ:
ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಪ್ರೇಮ, ಆಕ್ಷನ್ ಮತ್ತು ಕುಟುಂಬ ಭಾವನೆಗಳನ್ನು ಒಟ್ಟುಗೂಡಿಸಿದ ಕಥಾಹಂದರ ಟ್ರೈಲರ್‌ನಲ್ಲೇ ಸ್ಪಷ್ಟವಾಗುತ್ತದೆ. ಅರ್ಜುನ್ ಅವರ ಪವರ್‌ಫುಲ್ ಎಂಟ್ರಿ ಹಾಗೂ ಆಕ್ಷನ್ ದೃಶ್ಯಗಳು ವಿಶೇಷವಾಗಿ ಗಮನ ಸೆಳೆದಿವೆ.
ಜಿ ಬಾಲಮುರುಗನ್ ಅವರ ಸಿನೆಮಾಟೋಗ್ರಫಿ, ಸಾಯಿ ಮಾಧವ್ ಬುರ್ರಾ ಅವರ ಡೈಲಾಗ್‌ಗಳು ಮತ್ತು ಅನುಪ್ ರುಬೆನ್ಸ್ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಲ ನೀಡಿವೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.



