ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರಿಟಿಗಳಲ್ಲಿ ಬೇರೆ ಧರ್ಮದ ಹುಡುಗ ಅಥವಾ ಹುಡುಗೀನ ಮದುವೆ ಆಗೋದು ಈಗ ಕಾಮನ್ ಆಗ್ಬಿಟ್ಟಿದೆ. ಅವ್ರೆಲ್ಲ ಪ್ರೀತಿ ಮಾಡಿ ಮದುವೆ ಆಗಿದ್ದಾರೆ ಹೊರತು ಧರ್ಮ ನೋಡಿ ಅಲ್ಲ ಅನ್ನೋರ ಸಾಲಿಗೆ ಸೇರಿರೋರು 2024ರಲ್ಲಿ ಮದುವೆ ಆದ ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್.
ಸಿಂಪಲ್ ಆಗಿ ಕೋರ್ಟ್ ಮ್ಯಾರೇಜ್ ಮಾಡ್ಕೊಂಡ ಈ ಜೋಡಿ ನಂತ್ರ ಸೆಲೆಬ್ರಿಟಿಗಳಿಗೆ ಪಾರ್ಟಿ ನೀಡಿದ್ರು. ಈಗ ಅವ್ರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 8 ತಿಂಗಳಾಗಿದೆ. ಸೋನಾಕ್ಷಿ ಮದುವೆ ನಂತ್ರ ಅನೇಕ ಕಡೆ ತಮ್ಮ ಪತಿ ಜೊತೆ ಕಾಣಿಸಿಕೊಂಡಿದ್ರು. ಈಗ ಸೋನಾಕ್ಷಿಗೆ ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆಯೊಂದು ಎದುರಾಗಿದೆ.
ಹೌದು! ಸೋನಾಕ್ಷಿ ಈಗ ಮುಸ್ಲಿಂ ಧರ್ಮದ ಹುಡುಗನನ್ನು ಮದುವೆ ಆಗಿರೋ ಕಾರಣ ಅವರು ಧರ್ಮ ಬದಲಿಸ್ತಾರಾ ಎನ್ನುವ ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದ್ದು ಇದಕ್ಕೆ ಸರಿಯಾಗಿಯೇ ಸೋನಾ ಉತ್ತರ ನೀಡಿದ್ದಾರೆ.
‘ನಾವು ಇಬ್ಬರು ವ್ಯಕ್ತಿಗಳಾಗಿ ಪರಸ್ಪರ ಪ್ರೀತಿ ಮಾಡಿದ್ದೇವೆ. ಅವರ ಧರ್ಮವನ್ನು ನನ್ನ ಮೇಲೆ ಹೇರೋದಿಲ್ಲ. ನಾನು ನನ್ನ ಧರ್ಮವನ್ನು ಅವರ ಮೇಲೆ ಹೇರುತ್ತಿಲ್ಲ. ನಾವಿಬ್ಬರು ಪರಸ್ಪರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಾತು ಮುಂದುವರೆಸುತ್ತಾ, ನಾನು ನನ್ನ ಮನೆಯ ಸಂಪ್ರದಾಯವನ್ನು ಪಾಲಿಸುವುದ್ರ ಜೊತೆಗೆ ಅವರ ಸಂಸ್ಕೃತಿಯನ್ನು ಗೌರವಿಸುತ್ತಿದ್ದೇನೆ ಎಂದು ಹೇಳಿದ್ದು, ಈ ಮೂಲಕ ಯಾವುದೇ ಧರ್ಮ ಬದಲಾವಣೆ ಇಲ್ಲ ಎಂಬುದನ್ನು ಸೋನಾಕ್ಷಿ ಸ್ಪಷ್ಟಪಡಿಸಿದ್ದಾರೆ.
ಮದುವೆಯಾಗಲು ಉತ್ತಮ ಮಾರ್ಗ ಅಂದ್ರೆ ವಿಶೇಷ ವಿವಾಹ ಕಾಯ್ದೆ. ಇದ್ರಲ್ಲಿ ಹಿಂದೂ ಮಹಿಳೆ, ಬೇರೆ ಧರ್ಮದ ಹುಡುಗನನ್ನು ಮದುವೆ ಆಗೋದಾದ್ರೆ ಧರ್ಮ ಬದಲಿಸಬೇಕಾಗಿಲ್ಲ. ಹಾಗೆಯೇ ಪುರುಷ ಕೂಡ ತನ್ನ ಧರ್ಮವನ್ನು ಬದಲಿಸಬೇಕಾಗಿಲ್ಲ ಎಂದು ಸೋನಾಕ್ಷಿ ಹೇಳಿದ್ದಾರೆ.