CINE | ಫಾರಿನ್ ನಲ್ಲಿ ಕಮಾಲ್ ಮಾಡ್ತಿದ್ದಾಳೆ ಸುಲೋಚನಾ: ಶೇ.160 ಲಾಭ ಗಳಿಸಿದ Su From So!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ಹಾಗೂ ನಟ ಜೆ.ಪಿ. ತುಮಿನಾಡ್‌ ಅವರ ‘Su From So’ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಂಪರ್ ಯಶಸ್ಸು ಕಂಡಿದ್ದು, ಚಿತ್ರತಂಡದ ಮುಖದಲ್ಲಿ ಸಂತೋಷ ಮೂಡಿಸಿದೆ. ಚಲನಚಿತ್ರವು ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶದ ಬಾಕ್ಸ್ ಆಫಿಸ್ನಲ್ಲೂ ಭರ್ಜರಿ ಪ್ರದರ್ಶನ ನೀಡುತ್ತಿದೆ.

ಜರ್ಮನಿಯಲ್ಲಿ ಈ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ €30,000 ಗಳಿಸಿದ್ದು, ಕೆಜಿಎಫ್-2 ನಂತರ ಅತಿದೊಡ್ಡ ಓಪನಿಂಗ್ ಪಡೆದ ಕನ್ನಡ ಚಿತ್ರವೆಂದು ಹೆಸರುಗಟ್ಟಿದೆ. ಹ್ಯಾಂಬರ್ಗ್ ನಲ್ಲಿ 12ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿದೆ. ಕನ್ನಡ ಚಿತ್ರಪ್ರಿಯರು ಈ ಚಿತ್ರವನ್ನು ತೆರೆದ ಮನದಿಂದ ಸ್ವೀಕರಿಸುತ್ತಿದ್ದಾರೆ.

ಭಾರತದಲ್ಲೂ ಈ ಚಿತ್ರ ಗಮನಾರ್ಹ ಯಶಸ್ಸು ಗಳಿಸಿದೆ. ಬುಕ್‌ಮೈಶೋನಲ್ಲಿ ಈ ಚಿತ್ರದ ಟಿಕೆಟ್ ಮಾರಾಟ ಎತ್ತರಕ್ಕೆ ಏರಿದೆ. ಮೊದಲ ವಾರದಲ್ಲಿ 774,880 ಟಿಕೆಟ್ ಮಾರಾಟವಾದರೆ, ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ. ದೇಶದಾದ್ಯಾಂತ 9,000ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯುತ್ತಿವೆ. ಫಾಸ್ಟ್ ಫಿಲ್ಲಿಂಗ್ ಚಿತ್ರವನ್ನಾಗಿ ಗುರುತಿಸಲ್ಪಟ್ಟ ಈ ಸಿನಿಮಾ 4,500 ಕ್ಕೂ ಹೆಚ್ಚು ಶೋಗಳನ್ನು ದಾಖಲಿಸಿದೆ.

ಕೇವಲ 4-5 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ, ರವಿ ರೈ ಕಳಸ ಹಾಗೂ ಶಶಿಧರ್ ಶೆಟ್ಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ವಾರ ಬಿಡುಗಡೆ ಆಗಬೇಕಿದ್ದ ನಾಲ್ಕು ಚಿತ್ರಗಳ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. Su From So ಇದೀಗ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!