Tuesday, November 25, 2025

CINE | ಗೋವಾಗೆ ಹೊರಟ ಸುಲೋಚನಾ: ಇಂಡಿಯನ್ ಪನೋರಮಾದಲ್ಲಿ ‘ಸು ಫ್ರಮ್ ಸೋ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ‘ಸು ಫ್ರಮ್ ಸೋ’ ಚಿತ್ರ ಇದೀಗ ಮತ್ತೊಂದು ಮಹತ್ವದ ಸಾಧನೆಯತ್ತ ಕಾಲಿಟ್ಟಿದೆ. ಕೇವಲ 6 ಕೋಟಿ ಬಜೆಟ್‌ನಲ್ಲಿ ನಿರ್ಮಿತವಾದ ಈ ಸಿನಿಮಾ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಸೇರುವ ಮಟ್ಟಿನ ಭಾರೀ ಜನಪ್ರಿಯತೆ ಪಡೆದಿತ್ತು. ಕೂಲಿ ಮತ್ತು ವಾರ್-2 ನಂತಹ ದೊಡ್ಡ ಚಿತ್ರಗಳ ಮಧ್ಯೆಯೂ ತನ್ನ ಓಟವನ್ನು ಮುಂದುವರಿಸಿಕೊಂಡ ಈ ಚಿತ್ರ ಈಗ ಇಂಡಿಯನ್ ಪನೋರಮಾಗೆ ಅಧಿಕೃತವಾಗಿ ಆಯ್ಕೆಯಾಗಿದೆ.

ಈ ತಿಂಗಳು 20ರಿಂದ ಆರಂಭವಾದ ಗೋವಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಚಿತ್ರವನ್ನು ಪ್ರದರ್ಶನಗೊಳಿಸಲಾಗುತ್ತಿದ್ದು, ನವೆಂಬರ್ 22ರಂದು ಬೆಳಿಗ್ಗೆ 9.30ಕ್ಕೆ ವಿಶೇಷ ಪ್ರದರ್ಶನ ನಿಗದಿಯಾಗಿದೆ.
ಐದು ತಿಂಗಳ ಹಿಂದೆ ಬಿಡುಗಡೆಯಾದ ಈ ಸಿನಿಮಾ ಈಗಾಗಲೇ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ನಿರ್ದೇಶಕ ಜೆ.ಪಿ. ತುಮ್ಮಿನಾಡ್ ಹಾಗೂ ಪ್ರಮುಖ ಪಾತ್ರಧಾರಿ ಶನೀಲ್ ಗೌತಮ್ ಸೇರಿ ಸಿನಿಮಾದ ತಂಡ ಈಗಾಗಲೇ ಗೋವಾಕ್ಕೆ ತೆರಳಿದ್ದು, ತಮ್ಮ ಸಂತೋಷವನ್ನು ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ. ಕೇವಲ 75 ಥಿಯೇಟರ್‌ಗಳಲ್ಲಿ ಆರಂಭವಾದ ಈ ಚಿತ್ರಕ್ಕೆ ಬಿಡುಗಡೆ ಬಳಿಕ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸ್ಕ್ರೀನ್‌ಗಳ ಸಂಖ್ಯೆಯೂ ಏರಿಕೆಯಾಯಿತು. ಮೂರು ದಿನಗಳಲ್ಲಿ 6 ಕೋಟಿ ಮತ್ತು ಒಟ್ಟಾರೆ 140 ಕೋಟಿ ಕಲೆಕ್ಷನ್ ಮಾಡಿರುವ ‘ಸು ಫ್ರಮ್ ಸೋ’ ಅಭಿನಂದನೆಗೆ ಪಾತ್ರವಾಗಿರುವ ಹೊಸ ಭರವಸೆಯ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ.

error: Content is protected !!