Sunday, October 26, 2025

CINE | ಧನುಷ್ ನಿರ್ದೇಶನದ ‘ಇಡ್ಲಿ ಕಡೈ’ಗೆ ತೆಲುಗು ಪ್ರೇಕ್ಷಕರಿಂದ ಜೈಕಾರ; ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್, ತೆಲುಗಿನ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಈ ಬಾರಿ ಅವರು ನಟ ಹಾಗು ನಿರ್ದೇಶಕರಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅಕ್ಟೋಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಇಡ್ಲಿ ಕಡೈ’, ಧನುಷ್ ಅವರ ವಿಶಿಷ್ಟ ಕಥನ ಶೈಲಿಯ ಕಥಾ ಹಂದರ ಹೊಂದಿದ್ದು, ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನ ಮತ್ತು ಹಳೆಯ ಕುಟುಂಬ ಬಾಂಧವ್ಯಗಳ ಸಂಕೀರ್ಣತೆಯನ್ನು ತೋರಿಸುತ್ತದೆ.

ಈಗ ಈ ‘ಇಡ್ಲಿ ಕಡೈ’ ಚಿತ್ರವು ಅಕ್ಟೋಬರ್ 29 ರಿಂದ OTT ಗೆ ಬರಲಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ. ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಚಿತ್ರವು ಶಿವ ಕೇಶವುಲು (ರಾಜ್‌ಕಿರಣ್) ಎಂಬ ಹಳ್ಳಿ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿದೆ. ಅವನು ತನ್ನ ಹಳ್ಳಿಯ ಜನರಿಗೆ ತಮ್ಮ ಹಳೆಯ “ಇಡ್ಲಿ ಕಡೈ” ಮೂಲಕ ಸಂತೋಷವನ್ನು ಹರಡುತ್ತಾನೆ. ಆದರೆ ಮಗ ಮುರಳಿ (ಧನುಷ್) ಆಧುನಿಕತೆಯನ್ನು ಸ್ವೀಕರಿಸಿ, ಹಳ್ಳಿಯ ಸಣ್ಣ ಇಡ್ಲಿ ಅಂಗಡಿಯನ್ನ ದೊಡ್ಡ ವ್ಯವಹಾರವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಾನೆ. ಈ ಒತ್ತಡ, ತಂದೆ-ಮಗ ಸಂಬಂಧ, ಊರಿನ ಬಾಂಧವ್ಯಗಳು ಮತ್ತು ಹೊಸ ನಗರ ಜೀವನದ ಸವಾಲುಗಳ ನಡುವೆ, ಪ್ರೇಕ್ಷಕರು ಕಥೆಯ ತಿರುವುಗಳನ್ನು ನೋಡುತ್ತಾರೆ.

ಬ್ಯಾಂಕಾಕ್ ಪ್ರವಾಸ, ವ್ಯವಹಾರ ಪಾಲುದಾರರೊಂದಿಗೆ ಸಂಬಂಧ, ಮತ್ತು ಕುಟುಂಬದ ಕಡೆಗಣನೆ ಮುರಳಿಯ ಜೀವನದಲ್ಲಿ ಗಂಭೀರ ಪರಿಣಾಮ ಬೀರುತ್ತವೆ. ಕಥೆಯಲ್ಲಿ ಮೀರಾ (ಶಾಲಿನಿ ಪಾಂಡೆ) ಮತ್ತು ಕಲ್ಯಾಣಿ (ನಿತ್ಯ ಮೆನನ್) ಪಾತ್ರಗಳು ಪ್ರಮುಖವಾಗಿದೆ. ಪ್ರೇಕ್ಷಕರು ಕುಟುಂಬ, ಪರಂಪರೆ, ಪ್ರಗತಿ ಮತ್ತು ಸಂಬಂಧಗಳ ಸಂಕೀರ್ಣತೆಯೊಂದಿಗೆ ‘ಇಡ್ಲಿ ಕಡೈ’ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ.

error: Content is protected !!