ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 18 ರಂದು ಬಿಡುಗಡೆಯಾದ ತಮಿಳು ಥ್ರಿಲ್ಲರ್ ಸಿನಿಮಾ ‘TenHours’ ಚಿತ್ರಮಂದಿರಗಳಲ್ಲಿ ತೆರೆಕಂಡ ಒಂದು ತಿಂಗಳ ನಂತರ ಈಗ OTT ಬಂದಿದೆ. ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಮೆಚ್ಚುಗೆ ಗಳಿಸದಿದ್ದರು, ಒಟಿಟಿಯಲ್ಲಿ ಮಾತ್ರ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.
ಈ ಚಿತ್ರದಲ್ಲಿ ಸಿಬಿ ಸತ್ಯರಾಜ್, ನಿರಂಜನ ಅನೂಪ್, ಗಜರಾಜ್ ಮತ್ತು ರಾಜ್ ಅಯ್ಯಪ್ಪ ಸೇರಿದಂತೆ ಇತರರು ನಟಿಸಿದ್ದಾರೆ. ಚೊಚ್ಚಲ ಇಳಯರಾಜ ಕಲಿಯಪೆರುಮಾಳ್ ನಿರ್ದೇಶಿಸಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಜೈ ಕಾರ್ತಿಕ್ ನಿರ್ವಹಿಸಿದ್ದಾರೆ, ಸಂಗೀತವನ್ನು ಕೆ.ಎಸ್. ಸುಂದರಮೂರ್ತಿ ಮತ್ತು ಸಂಕಲನವನ್ನು ಲಾರೆನ್ಸ್ ಕಿಶೋರ್ ನಿರ್ವಹಿಸಿದ್ದಾರೆ.
ಈ ಚಿತ್ರವು ಪ್ರಸ್ತುತ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ , ತಮಿಳು ಮತ್ತು ಮಲಯಾಳಂ ಎರಡರಲ್ಲೂ ಸ್ಟ್ರೀಮಿಂಗ್ ಆಗಿದೆ.
ಚೆನ್ನೈನಿಂದ ಕೊಯಮತ್ತೂರಿಗೆ ಹೋಗುವ ರಾತ್ರಿ ಬಸ್ಸಿನಲ್ಲಿ ಪ್ರಯಾಣಿಕರ ಗಮನಕ್ಕೆ ಬಾರದೆ ಒಂದು ನಿಗೂಢ ಕೊಲೆ ನಡೆಯುತ್ತದೆ. ಅದು ಹೇಗೆ ಸಂಭವಿಸಿತು? ನಾಯಕ ಕ್ಯಾಸ್ಟ್ರೋ ಹತ್ತು ಗಂಟೆಗಳಲ್ಲಿ ಸತ್ಯವನ್ನು ಬಯಲು ಮಾಡಲು ಪಟ್ಟ ಹರಸಾಹಸ ಏನು ಎನ್ನೋದು ಕಥೆ ನೋಡಿದ ಮೇಲೆ ತಿಳಿಯಬೇಕೆಷ್ಟೇ.