ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಟಿಟಿ ವೇದಿಕೆಯಲ್ಲಿ ಬಿರುಗಾಳಿ ಎಬ್ಬಿಸಿ ಪ್ರೇಕ್ಷಕರ ಹೃದಯದಲ್ಲಿ ಛಾಪು ಮೂಡಿಸಿದೆ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯ ಮೂರನೇ ಸೀಸನ್ ಬಿಡುಗಡೆಗೆ ದಿನಾಂಕ ಫೈನಲ್ ಆಗಿದೆ.
ವರದಿಯ ಪ್ರಕಾರ, ‘ಒಟಿಟಿ ಪ್ಲೇ ಅವಾರ್ಡ್ಸ್ 2025’ ಸಂದರ್ಭದಲ್ಲಿ, ದಿ ಫ್ಯಾಮಿಲಿ ಮ್ಯಾನ್ 3 ನವೆಂಬರ್ 2025 ರಲ್ಲಿ ಸ್ಟ್ರೀಮ್ ಆಗಲಿದೆ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ನ ಮೊದಲ ಎರಡು ಸೀಸನ್‌ಗಳಂತೆ, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಫ್ಯಾಮಿಲಿ ಮ್ಯಾನ್ ಸೀಸನ್ 3 ಕೂಡ ಲಭ್ಯವಿರುತ್ತದೆ.
ಸೀಸನ್ 3 ರಲ್ಲಿ ನಟ ಜೈದೀಪ್ ಅಹ್ಲಾವತ್ ಅವರು ನಟಿಸುತ್ತಿದ್ದಾರೆ, ಅವರು ಸರಣಿಯಲ್ಲಿ ಮುಖ್ಯ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ.