April 13, 2026
Monday, April 13, 2026
spot_img

CINE | ‘ದಿ ಕೇರಳ ಸ್ಟೋರಿ 2’: ವೀಕೆಂಡ್ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಆಯ್ತು, ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಾದಗಳ ಸುತ್ತಲೇ ಪ್ರಚಾರ ಪಡೆದ ‘ದಿ ಕೇರಳ ಸ್ಟೋರಿ’ ಬಳಿಕ ಇದೀಗ ಅದರ ಮುಂದುವರಿದ ಭಾಗವಾದ ದಿ ಕೇರಳ ಸ್ಟೋರಿ 2 ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಯ ಮುನ್ನ ಕಾನೂನು ಸವಾಲು ಎದುರಿಸಿದ್ದ ಚಿತ್ರಕ್ಕೆ ಕೇರಳ ಹೈ ಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು. ನಂತರ ಮರು ವಿಚಾರಣೆ ನಡೆಸಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದ್ದು, ಶುಕ್ರವಾರ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

ಮೊದಲ ದಿನ ಚಿತ್ರವು 75 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಆದರೆ ವಾರಾಂತ್ಯದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು ಶನಿವಾರ 4.65 ಕೋಟಿ ಮತ್ತು ಭಾನುವಾರ 5 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರಿಂದ ಬಾಕ್ಸ್ ಆಫೀಸ್‌ನಲ್ಲಿ ಚೇತರಿಕೆ ಕಂಡಿದೆ.

ಇದನ್ನೂ ಓದಿ:

ಈ ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಹಾಗೂ ಐಶ್ವರ್ಯಾ ಓಝಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಲವ್ ಜಿಹಾದ್ ಹಿನ್ನೆಲೆಯ ಕಥಾಹಂದರವೇ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈಗ ಎರಡನೇ ಭಾಗದ ಒಟ್ಟು ಕಲೆಕ್ಷನ್ ಎಷ್ಟು ಆಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !