September 24, 2026
Thursday, September 24, 2026
spot_img

ಚಾರ್ ಧಾಮ್ ಯಾತ್ರೆ ಯಾವಾಗ ಶುರು? ಹೋಗೋದು ಹೇಗೆ? ಇಲ್ಲಿದೆ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಒಟ್ಟಾಗಿ ಚಾರ್ ಧಾಮ್ ಎಂದು ಕರೆಯಲಾಗುತ್ತದೆ. ವರ್ಷದಲ್ಲಿ ಸೀಮಿತ ಅವಧಿಗೆ ಮಾತ್ರ ತೆರೆಯುವ ಈ ದೇವಾಲಯಗಳ ಯಾತ್ರೆಗೆ ಭಕ್ತರು ಉತ್ಸುಕತೆಯಿಂದ ಕಾಯುತ್ತಿದ್ದಾರೆ.

ಈ ವರ್ಷ ಯಮುನೋತ್ರಿ ಮತ್ತು ಗಂಗೋತ್ರಿ ಏಪ್ರಿಲ್ 19ರಂದು, ಕೇದಾರನಾಥ ಏಪ್ರಿಲ್ 22ರಂದು ಹಾಗೂ ಬದರಿನಾಥ ಏಪ್ರಿಲ್ 23ರಂದು ಭಕ್ತರಿಗೆ ದರ್ಶನಕ್ಕೆ ತೆರೆದಿಡಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್‌ನಿಂದ ನವೆಂಬರ್ ವರೆಗೆ ಯಾತ್ರೆ ನಡೆಯುತ್ತದೆ. ಮೊದಲು ಯಮುನೋತ್ರಿ, ನಂತರ ಗಂಗೋತ್ರಿ, ಬಳಿಕ ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡುವ ಪರಂಪರೆ ಇದೆ.

ಇದನ್ನೂ ಓದಿ:

ಯಮುನೋತ್ರಿ ಮತ್ತು ಕೇದಾರನಾಥಕ್ಕೆ ಭಕ್ತರು ಭಾಗಶಃ ಕಾಲ್ನಡಿಗೆಯಲ್ಲಿ ತೆರಳಬೇಕು, ವೃದ್ಧರಿಗೆ ಕುದುರೆ, ಪಲ್ಲಕ್ಕಿ ಹಾಗೂ ಹೆಲಿಕಾಪ್ಟರ್ ಸೇವೆಗಳು ಲಭ್ಯ. ಗಂಗೋತ್ರಿ ಸಮೀಪ ಗೋಮುಖ, ಕೇದಾರನಾಥ ಬಳಿ ಗೌರಿಕುಂಡ್, ಬದರಿನಾಥದ ಬಳಿ ವಸುಧಾರಾ ಜಲಪಾತ ಮೊದಲಾದ ಪ್ರವಾಸಿ ತಾಣಗಳಿವೆ.

ಯಾತ್ರೆಗೆ ಮುಂಚಿತ ನೋಂದಣಿ ಕಡ್ಡಾಯ. ಆಧಾರ್ ಅಥವಾ ಮಾನ್ಯ ಗುರುತಿನ ಚೀಟಿ, ಫೋಟೋ ಹಾಗೂ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವ್ಯವಸ್ಥೆಗಳು ಲಭ್ಯವಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಖಂಡ ಪ್ರವಾಸೋದ್ಯಮ ಅಥವಾ ಚಾರ್‌ಧಾಮ್ ಯಾತ್ರಾ ಪೋರ್ಟಲ್ https://registrationandtouristcare.uk.gov.in/ ಅನ್ನು ಕ್ಲಿಕ್ ಮಾಡಿ ಹಾಗೂ ಮತ್ತು ವಿವರಗಳು, ದಾಖಲೆಗಳನ್ನು ಸಲ್ಲಿಸಿ, ನಿಮ್ಮ ಹೆಸರನ್ನು ನೋಂದಾಯಿಸಿ ಹಾಗೂ ದಿನಾಂಕಗಳನ್ನು ಆಯ್ಕೆ ಮಾಡಬಹುದು.

Must Read