CINE | `ದಿ ರಾಜಾ ಸಾಬ್’ ಚಿತ್ರದ ಟೀಸರ್ ರಿಲೀಸ್.. ಪ್ರಭಾಸ್ ಕೈ ಹಿಡಿಯುತ್ತಾ ಈ ವಿಭಿನ್ನ ಪ್ರಾಜೆಕ್ಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಹುಬಲಿ ಚಿತ್ರದ ಯಶಸ್ಸಿನ ಬಳಿಕ ಪ್ರಭಾಸ್‌ಗೆ ಯಾವ ಚಿತ್ರವೂ ಕೈ ಹಿಡಿಯುತ್ತಿಲ್ಲ. ಹೀಗಾಗಿ ಪ್ರಭಾಸ್ ಹೊಸ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. `ದಿ ರಾಜಾ ಸಾಬ್’ ಪ್ರಭಾಸ್ ಅಭಿನಯದ ರಾಜಾಸಾಬ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಪ್ರಭಾಸ್ ನಟನೆಯ ಮೇಲೆ ಸಾಕಷ್ಟು ಕುತೂಹಲ ಮೂಡಿಸಿದೆ.

ಪ್ರಭಾಸ್ ಹಾಗೂ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ `ದಿ ರಾಜಾ ಸಾಬ್’ ಹಾರರ್, ಫ್ಯಾಂಟಸಿ ಕಥೆಯ ಚಿತ್ರ. ಪ್ರಭಾಸ್ ವಿಭಿನ್ನ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು. ಈ ಮೂಲಕ ಹೊಸ ಪ್ರಯೋಗಕ್ಕೆ ಪ್ರಭಾಸ್ ಮುಂದಾದಂತೆ ಕಾಣುತ್ತಿದೆ. ಟೀಸರ್‌ನ ಕೊನೆಯಲ್ಲಿ ಪ್ರಭಾಸ್‌, ಚಾಮುಂಡಿ ತಾಯಿ ಕಾಪಾಡಮ್ಮ ಎಂದು ಬೇಡಿಕೊಂಡಿದ್ದಾರೆ. ವಿಶೇಷ ಅಂದ್ರೆ 5 ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಕನ್ನಡದಲ್ಲೂ ಟೀಸರ್ ರಿಲೀಸ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!