ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತ್ತೊಮ್ಮೆ ಟಾಲಿವುಡ್ಗೆ ರಿಯಲ್ ಸ್ಟಾರ್ ಉಪೇಂದ್ರ ಕಾಲಿಟ್ಟಿದ್ದಾರೆ. ರಾಮ್ ಪೋತಿನೇನಿ ಅಭಿನಯದ ಚಿತ್ರದಲ್ಲಿ ಪ್ರಮುಖ ರೋಲ್ ಮಾಡ್ತಿರೋ ಉಪ್ಪಿ ಲುಕ್ ಹೇಗಿದೆ ಅನ್ನೋದನ್ನ ಸಿನಿಮಾ ತಂಡವೇ ಪೋಸ್ಟರ್ ಮೂಲಕ ರಿವೀಲ್ ಮಾಡಿದೆ.
ಉಪೇಂದ್ರ ಅವರು ಈ ಚಿತ್ರದಲ್ಲಿ ಸೂರ್ಯ ಕುಮಾರ್ ಅನ್ನುವ ರೋಲ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಕಣ್ಣಿಗೆ ಗ್ಲಾಸ್ ಧರಿಸಿದ್ದಾರೆ. ಶರ್ಟ್ ಮೇಲೆ ಜಾಕೆಟ್ ಬೇರೆ ಇದೆ. ಹಿಂದೆ ಸಾಕಷ್ಟು ಜನ ನಿಂತಿದ್ದಾರೆ. ಅವರಿಗೆ ಬೆನ್ನು ಮಾಡಿ ಉಪ್ಪಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಉಪೇಂದ್ರ ಅಭಿನಯದ ಈ ಚಿತ್ರಕ್ಕೆ RAPO22 ಅನ್ನುವ ಟೈಟಲ್ ಇದೆ. RAPO22 ಅಂದ್ರೆ, ರಾಮ್ ಪೋತಿನೆನಿ ಅವರ 22ನೇ ಸಿನಿಮಾ ಅಂತ ಅರ್ಥ.
ಈ ಹಿಂದೆ ಕೂಡ ಉಪ್ಪಿ ತೆಲುಗು ಸಿನಿಮಾಗಳನ್ನ ಮಾಡಿದ್ದಾರೆ. S/O ಸತ್ಯಮೂರ್ತಿ ಚಿತ್ರ ಮಾಡಿದ್ದರು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಹೀರೋ ಆಗಿದ್ದರು. ಟಾಸ್ ಹೆಸರಿನ ಚಿತ್ರದಲ್ಲೂ ಉಪೇಂದ್ರ ನಟಸಿದ್ದಾರೆ.