March 4, 2026
Wednesday, March 4, 2026
spot_img

CINE | ಒಂದೇ ತಿಂಗಳಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳು: ಕೆವಿಎನ್ ಸಂಸ್ಥೆಯ ಸ್ಟ್ರಾಟಜಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ 4ರ ಬೆಳಿಗ್ಗೆ ನಟ ಯಶ್ ಅಭಿಮಾನಿಗಳಿಗೆ ಕೆವಿಎನ್ ಸಂಸ್ಥೆ ನಿರಾಸೆಯ ಸುದ್ದಿಯೊಂದನ್ನು ನೀಡಿದೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ಚಿತ್ರತಂಡ ಈಗ ಬಿಡುಗಡೆಯ ದಿನಾಂಕವನ್ನು ಬದಲಿಸಿದ್ದು, ಜೂನ್ 4ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದೆ. ಈ ಬದಲಾವಣೆ ಈಗ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.

ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರವನ್ನು ಜೂನ್ 22ರ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡಲು ತಂಡ ಈ ಹಿಂದೆ ಯೋಚಿಸಿತ್ತು. ಈಗ ‘ಟಾಕ್ಸಿಕ್’ ಕೂಡ ಜೂನ್ 4ಕ್ಕೆ ನಿಗದಿಯಾಗಿರುವುದರಿಂದ, ಒಂದೇ ತಿಂಗಳಲ್ಲಿ ಕೆವಿಎನ್ ಸಂಸ್ಥೆಯ ಎರಡು ಬೃಹತ್ ಚಿತ್ರಗಳು ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿದೆ.

ಯಾವುದೇ ಅನುಭವವಿರುವ ನಿರ್ಮಾಪಕರು ತಮ್ಮದೇ ಸಂಸ್ಥೆಯ ಎರಡು ಬಿಗ್ ಬಜೆಟ್ ಸಿನಿಮಾಗಳನ್ನು ಒಂದೇ ತಿಂಗಳಲ್ಲಿ ಬಿಡುಗಡೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಇದು ಕಲೆಕ್ಷನ್ ಮೇಲೆ ನೇರ ಪರಿಣಾಮ ಬೀರಬಹುದು.

ಈ ‘ಬಾಕ್ಸ್ ಆಫೀಸ್ ಕ್ಲಾಶ್’ ತಪ್ಪಿಸಲು ಕೆವಿಎನ್ ಸಂಸ್ಥೆ ಹೊಸ ಸ್ಟ್ರಾಟಜಿ ಮಾಡುವ ಸಾಧ್ಯತೆ ಇದೆ. ಒಂದೋ ‘ಜನ ನಾಯಗನ್’ ದಿನಾಂಕ ಬದಲಾಗಬೇಕು ಅಥವಾ ‘ಟಾಕ್ಸಿಕ್’ ಪ್ರಚಾರದ ತಂತ್ರಗಾರಿಕೆಯಲ್ಲಿ ಬದಲಾವಣೆ ತರಬೇಕು. ಈ ಗೊಂದಲಗಳಿಗೆ ಚಿತ್ರತಂಡವೇ ಅಧಿಕೃತ ಉತ್ತರ ನೀಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !