ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ಸೇತುಪತಿ ಹಾಗೂ ನಿತ್ಯಾ ಮೆನನ್ ಅಭಿನಯದ ಹೊಸ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಬಿಡುಗಡೆಗೊಂಡಿದೆ.
ಈ ಚಿತ್ರಕ್ಕೆ ‘ತಲೈವನ್ ತಲೈವಿ’ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಸತ್ಯ ಜ್ಯೋತಿ ಫಿಲಂಸ್ ನಿರ್ಮಿಸಿದೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರತಂಡ ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದು, ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಡ ಹೆಂಡತಿಯ ನಡುವಿನ ಹಾಸ್ಯಮಯ ಸಂಭಾಷಣೆಯನ್ನು ಟೀಸರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಟೀಸರ್ ನ ಕೊನೆಯಲ್ಲಿ ‘ಅವರು ಸಾಮಾನ್ಯ ಜನರಲ್ಲ. ನಾನು ಹೇಳುವುದನ್ನು ಅರ್ಥಮಾಡಿಕೊಳ್ಳಿ’ ಎಂಬ ಯೋಗಿ ಬಾಬು ಅವರ ಸಾಲು ಬೆದರಿಕೆಯಂತೆ ಕಂಡಿದೆ.