Sunday, December 21, 2025

CINE | ಥಾಯ್ಲೆಂಡ್‌ನಿಂದ ಬೆಂಗಳೂರಿಗೆ ನಟ ದರ್ಶನ್ ವಾಪಸ್ ಬರೋದು ಯಾವಾಗ? ಇಲ್ಲಿದೆ ಡೀಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಪ್ರಸ್ತುತ ಥಾಯ್ಲೆಂಡ್‌ನಲ್ಲಿ ಇದ್ದಾರೆ. ಪತ್ನಿ ಮಗನ ಜೊತೆ ರಿಲ್ಯಾಕ್ಸ್ ಆಗಲೆಂದು ಚಿತ್ರೀಕರಣದ ಬಳಿಕವೂ ಅಲ್ಲಿಯೇ ಉಳಿದುಕೊಂಡಿದ್ದರು. ಆದರೆ ಇದೇ ಗುರುವಾರವೇ ಅವರ ಜಾಮೀನು ಭವಿಷ್ಯ ನಿರ್ಧಾರವಾಗುತ್ತೆ. ಇದೀಗ ಜುಲೈ 25ಕ್ಕೆ ದರ್ಶನ್ ಬೆಂಗಳೂರಿಗೆ ವಾಪಸ್ಸಾಗುವ ದಿನಾಂಕ ಫಿಕ್ಸ್ ಆಗಿದೆ.

`ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆಂದು ದರ್ಶನ್ 10 ದಿನಗಳ ಮಟ್ಟಿಗೆ ಥಾಯ್ಲೆಂಡ್ ದೇಶಕ್ಕೆ ತೆರಳಿದ್ದರು. ಹಾಡಿನ ಚಿತ್ರೀಕರಣ ಮುಗಿದಿದ್ದು ಸಿನಿಮಾ ತಂಡ ವಾಪಸ್ಸಾಗಿದೆ.

ಅದೇನೇ ಆದ್ರೂ ದರ್ಶನ್ ಥಾಯ್ಲೆಂಡ್‌ನಿಂದ ವಾಪಸ್ ಬರುವ ವಿಮಾನ ಟಿಕೆಟ್ ಅನ್ನೂ ಬುಕ್ ಮಾಡಿದ್ದು ಶುಕ್ರವಾರವೇ ವಾಪಸ್ಸಾಗಲಿದ್ದಾರೆ. ಗುರುವಾರ ಹೊರಬೀಳಲಿರುವ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಕೊಲೆ ಆರೋಪಿ ದರ್ಶನ್ ತಾತ್ಕಾಲಿಕ ನೆಮ್ಮದಿ ನಿರ್ಧಾರವಾಗುತ್ತೆ.

error: Content is protected !!