ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಿಕಾ ಪಡುಕೋಣೆ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ದೀಪಿಕಾ ತಮ್ಮ ನಟನೆಗೆ ಯಾವಾಗ ಕಮ್‌ಬ್ಯಾಕ್ ಮಾಡ್ತಾರೆ ಎಂಬುದರ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದೀಪಿಕಾ, ನನ್ನ ಬದುಕಿನಲ್ಲಿ ಈಗ ನಾನು ಹೊಸ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಒಬ್ಬ ತಾಯಿಯಾಗಿ ಮಗುವಿಗೆ ಹೇಗೆ ಸಮಯ ಕೊಡಬೇಕು. ನಾನು ಕೆಲಸಕ್ಕೆ ಮರಳುತ್ತೇನೆ ಎಂದರೆ ನನ್ನಲ್ಲಿ ಯಾವುದೇ ಪಾಪಪ್ರಜ್ಞೆ ಇರಬಾರದು. ನನ್ನ ಮಗಳಿಗೆ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.