CINE | ಮತ್ತೆ ‘ಕ್ರಿಶ್’ ಗೆ ಜೋಡಿಯಾಗ್ತಾರಾ ವಿಶ್ವ ಸುಂದರಿ? ಹಾಗಿದ್ರೆ ಬಾಲಿವುಡ್ ಗೆ ಕಮ್​ಬ್ಯಾಕ್ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಪ್ರಿಯಾಂಕಾ ಚೋಪ್ರಾ ಅವರು ಹಿಂದಿ ಸಿನಿಮಾಗಳಲ್ಲಿ ನಟಿಸದೇ ಬಹಳ ಸಮಯಗಳೇ ಆಗಿದೆ. ಬಾಲಿವುಡ್​ಗೆ ಪ್ರಿಯಾಂಕ ಕಮ್​ಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಈಗ ಮತ್ತೆ ಅವರಿಗೆ ಹಿಂದಿ ಚಿತ್ರರಂಗದ ಮೇಲೆ ಒಲವು ಮೂಡಿರುವ ಸೂಚನೆ ಸಿಕ್ಕಿದೆ.

ಹೌದು, ‘ಕ್ರಿಶ್ 4’ ಸಿನಿಮಾ ಮೂಲಕ ಬಾಲಿವುಡ್​ಗೆ ಮರಳುತ್ತಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ‘ಕ್ರಿಶ್’ ಮತ್ತು ‘ಕ್ರಿಶ್ 3’ ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ್ದರು. ಹೃತಿಕ್ ರೋಷನ್ ಅವರು ‘ಕ್ರಿಶ್ 4’ ಆಫರ್ ನೀಡಿದಾಗ ಪ್ರಿಯಾಂಕಾ ಚೋಪ್ರಾ ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಚಿತ್ರತಂಡದ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!