March 13, 2026
Friday, March 13, 2026
spot_img

CINE | ‘ತಮ್ಮ ಸುಖಾಗಮನ ಬಯಸುವ’ ಗಣಿ: 20 ವರ್ಷದ ಸಿನಿ ಪಯಣಕ್ಕೆ ಹೊಸ ಆರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ‘ಗೋಲ್ಡನ್ ಸ್ಟಾರ್’ ಎಂದು ಗುರುತಿಸಿಕೊಂಡಿರುವ ಗಣೇಶ್ ಸಿನಿ ಬದುಕಿಗೆ 20 ವರ್ಷಗಳು ಪೂರ್ಣವಾಗಿವೆ. ಟಿವಿ ನಿರೂಪಕರಾಗಿ ಆರಂಭಿಸಿದ ಅವರು, ನಂತರ ಕುಟುಂಬಪ್ರಧಾನ ನಾಯಕನಾಗಿ ಬೆಳ್ಳಿತೆರೆಯಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿಕೊಂಡರು. ಮಹಿಳಾ ಅಭಿಮಾನಿಗಳ ವಿಶೇಷ ಬೆಂಬಲವೂ ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ.

ಈ ಎರಡು ದಶಕಗಳ ಪಯಣವನ್ನು ಆಚರಿಸುವ ಉದ್ದೇಶದಿಂದ ‘ತಮ್ಮ ಸುಖಾಗಮನ ಬಯಸುವ’ ಎಂಬ ಹೊಸ ಚಿತ್ರ ಆರಂಭವಾಗಿದೆ. ಶಿವರಾತ್ರಿ ಪ್ರಯುಕ್ತ ನಡೆದ ಮುಹೂರ್ತ ಸಮಾರಂಭದಲ್ಲಿ ಪತ್ನಿ ಶಿಲ್ಪಾ ಕ್ಲಾಪ್ ಮಾಡಿ ಚಾಲನೆ ನೀಡಿದರು.

ಇದನ್ನೂ ಓದಿ:

ಪ್ರತಿಭಾವಂತ ನಿರ್ದೇಶಕ ದೀಪಕ್ ಗಂಗಾಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಗಣೇಶ್ ಅವರ ಭಾವನಾತ್ಮಕ ಮತ್ತು ಲವಲವಿಕೆಯ ಅಭಿನಯಕ್ಕೆ ಸೂಕ್ತ ವೇದಿಕೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, KRG Studios ಸಂಸ್ಥೆ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !