CINI | ಯುದ್ಧಕಾಂಡ ಸಿನಿಮಾಗಾಗಿ BMW ಮಾರಿದ ಅಜಯ್‌ ರಾವ್‌: ಮಾರ್ಕೆಟಿಂಗ್‌ ತಂತ್ರ ಎಂದ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜಯ್‌ ರಾವ್‌ ಅಭಿನಯದ ಯುದ್ಧಕಾಂಡ ಸಿನಿಮಾ ಏಪ್ರಿಲ್‌ 18 ರಂದು ಬಿಡುಗಡೆಗೆ ಸಿದ್ಧವಾಗಿದೆ.

ಇದರ ನಡುವೆ ಈ ಸಿನಿಮಾಗಾಗಿ ತಾವು ಪಟ್ಟ ಕಷ್ಟವನ್ನು ಅಜಯ್‌ ರಾವ್‌ ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಹೇಳಿಕೊಂಡಿದ್ದು, ಯುದ್ದಕಾಂಡ ಚಿತ್ರಕ್ಕಾಗಿ ನಟ ಅಜಯ್ ರಾವ್‌ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದರು ಎಂಬ ಅವರ ಹೇಳಿಕೆ ಸಖತ್ ವೈರಲ್ ಆಗಿತ್ತು.

ತನ್ನ ಮಗಳಿಗಾಗಿ ಈ ಸಿನಿಮಾವನ್ನು ಮಾಡಲೇಬೇಕು ಎಂದು ಪಣತೊಟ್ಟಿದ್ದ ಅಜಯ್‌ ರಾವ್‌ ತಮ್ಮ ಫೇವರಿಟ್‌ ಬಿಎಂಡಬ್ಲ್ಯು ಕಾರ್‌ಅನ್ನು ಕೂಡ ಮಾರಿದ್ದಾರೆ. ಕಾರ್‌ ಮಾರಾಟದಿಂದ ಬಂದ ಹಣವನ್ನು ಅವರು ಸಿನಿಮಾಗಾಗಿ ಹೂಡಿಕೆ ಮಾಡಿದ್ದಾರೆ.

ಬಿಎಂಡಬ್ಲ್ಯು ಕಾರ್‌ ಮಾರಾಟದ ವೇಳೆ ಅಜಯ್‌ ರಾವ್‌ ಮಗಳು ಚೆರಿಷ್ಮಾ ಆ ಕಾರ್‌ನ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಎಮೋಷನಲ್‌ ವಿಡಿಯೋ ಕೂಡ ವೈರಲ್‌ ಆಗಿತ್ತು. ಈ ವಿಡಿಯೋಗೆ ಹಲವು ಮಂದಿ ಕಾಮೆಂಟ್‌ ಮಾಡಿದ್ದು, ಇದು ಸಿಕ್ಕಾಪಟ್ಟೆ ಎಮೋಷನಲ್‌ ಆಗಿದೆ. ಆದರೆ, ಇದು ಮಾರ್ಕೆಟಿಂಗ್‌ ತಂತ್ರ ಎಂದೂ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!