ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್‌ಕುಮಾರ್ ಮೊಟ್ಟ ಮೊದಲನೆಯದಾಗಿ ನಟಿಸಿದ ಸಿನಿಮಾ ಅಪ್ಪು 14 ಮಾರ್ಚ್ ರಂದು ಅಂದರೆ ಇಂದು ಮರುಬಿಡುಗಡೆ ಆಗಿದೆ.
ಇಂದು ಬೆಂಗಳೂರಿನ ವೀರೇಶ್ ಥಿಯೇಟರ್ ನಲ್ಲಿ ಸಿನಿಮಾ ಮರುಬಿಡುಗಡೆಗೊಂಡಿತು. ಬೆಳಿಗ್ಗೆ 6.00 ಗಂಟೆಗೇ ಮೊದಲ ಶೋ ಶುರುವಾಗಿದ್ದು, 2002 ರಲ್ಲಿ ಬಿಡುಗಡೆಯಾಗಿದ್ದ ಅಪ್ಪು ಸಿನಿಮಾ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.
ಇಂದು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಕೂಡ ಹೌದು. ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ಸಿನಿಮಾ ಮರುಬಿಡುಗಡೆಗೆ ಚಾಲನೆ ನೀಡಿದರು. ಕರ್ನಾಟಕದ ಹಲವು ಕಡೆಗಳಲ್ಲಿ ರೀ ರಿಲೀಸ್ ಕಂಡಿರುವ ಈ ಸಿನಿಮಾ ಪ್ರದರ್ಶನ ಯಶಸ್ವಿಯಾಗಿ ನಡೆಯುತ್ತಿದೆ.