ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್ ಈಗ ಮತ್ತೊಂದು ಗ್ಲೋಬಲ್ ಸಿನಿಮಾ ಮಾಡಲು ಒಪ್ಪಿದ್ದಾರೆ. ಅದು ಯಾರ ಜೊತೆ ಅಂತೀರಾ? ಇನ್ಯಾರು ಅಲ್ಲ ಡೈರೆಕ್ಟರ್ ಅಟ್ಲಿ. ಬಹು ಕೋಟಿ ವೆಚ್ಚದಲ್ಲಿಯೇ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿಯೇ ಈ ಚಿತ್ರ ಬರ್ತಿದೆ. ಸದ್ಯಕ್ಕೆ ಈ ಚಿತ್ರಕ್ಕೆ AA22 ಅಂತಲೆ ಟೈಟಲ್ ಇಡಲಾಗಿದೆ.
ಅಲ್ಲು ಅರ್ಜುನ್ ಅವರ 22ನೇ ಚಿತ್ರದಲ್ಲಿ ಲೈವ್ ಆ್ಯಕ್ಷನ್ ಇದ್ದಂತೆ ಇದೆ. ಹಾಲಿವುಡ್‌ನ ವಿಎಫ್‌ಎಕ್ಸ್ ಟೀಮ್ ಅಲ್ಲು ಅರ್ಜುನ್ ಇಟ್ಟುಕೊಂಡು ಲೈವ್ ಆ್ಯಕ್ಷನ್ ಅಲ್ಲಿ ಕೆಲವು ದೃಶ್ಯಗಳನ್ನ ಕೂಡ ತೆಗೆದಿದೆಯಂತೆ.
ಲಾಸ್ ಏಂಜಲೀಸ್ ಗೆ ಅಟ್ಲಿ ಜೊತೆಗೆ ಅಲ್ಲು ಅರ್ಜುನ್ ಕೂಡ ಹೋಗಿದ್ದು, ಜೊತೆ ಜೊತೆಗೇನೆ ಹಾಲಿವುಡ್‌ನ ವಿಎಫ್‌ಎಕ್ಸ್ ಟೀಮ್ ಅನ್ನೂ ಭೇಟಿ ಆಗಿದ್ದಾರೆ.