ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ 1 ಸಿನಿಮಾ ಬಿಡುಗಡೆ ಕೂಡ ಮುಂದೂಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಕುರಿತ ಕೆಲ ಪೋಸ್ಟ್‌ಗಳು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕಾಂತಾರ ಚಿತ್ರತಂಡ ಮಹತ್ವದ ಅಪ್‌ಡೇಟ್ ನೀಡಿದೆ.
ಕಾಂತಾರ 1 ಸಿನಿಮಾ ವಿಳಂಬವಾಗುತ್ತಿದೆ ಅನ್ನೋ ಮಾತುಗಳು, ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ ಇದೀಗ ಕಾಂತಾರ ಚಿತ್ರತಂಡ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು,ಇದೇ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದೆ.
ಈ ಮಾಹಿತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಹಲವರು ಮತ್ತೊಮ್ಮೆ ಕಾಂತಾರ ಅತೀ ದೊಡ್ಡ ಇಂಡಸ್ಟ್ರೀ ಹಿಟ್ ನೀಡಲಿ ಎಂದು ಹಾರೈಸಿದ್ದಾರೆ.
ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾಗ ಫೈಟಿಂಗ್ ಸೀನ್ ಹಾಗೂ ಕೆಲಭಾಗಕ್ಕಾಗಿ 3 ತಿಂಗಳು ಕಳರಿ ಫೈಟ್, ಕುದುರೆ ಸವಾರಿ, ಕತ್ತಿ ವರಸೆ ಅಭ್ಯಾಸ ಮಾಡಿದ್ದಾರೆ. ಸಿನಿಮಾದ ಈ ಫೈಟಿಂಗ್ ದೃಶ್ಯವನ್ನು 40 ರಿಂದ 45 ದಿನ ಚಿತ್ರೀಕರಿಸಲಾಗಿದೆ.