ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರಿಟಿಗಳು ಹೆಚ್ಚಾಗಿ ಫೇಮಸ್ ಆದಾಗ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರನ್ನು ಬದಲಾಯಿಸಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಸಾಲಿಗೆ ಅಲ್ಲು ಅರ್ಜುನ್ ಕೂಡ ಸೇರುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರಿಗೆ ಎರಡು ಯು ಮತ್ತು ಎರಡು ಎನ್ ಗಳನ್ನು ಸೇರಿಸುವ ಬಗ್ಗೆ ಯೋಚಿಸುತ್ತಿದ್ದು, ಇದು ಅವರಿಗೆ ಇನ್ನಷ್ಟು ಯಶಸ್ಸು ಕೊಡಲಿದೆ ಎನ್ನಲಾಗುತ್ತಿದೆ.
ಬಾಲಿವುಡ್ ಮತ್ತು ಹಾಲಿವುಡ್ ಸೂಪರ್‌ಸ್ಟಾರ್‌ಗಳು ಸಂಖ್ಯಾಶಾಸ್ತ್ರದಿಂದ ಬಹಳ ಹಿಂದಿನಿಂದಲೂ ಪ್ರಭಾವಿತರಾಗಿದ್ದಾರೆ. ಹಲವಾರು ಚಲನಚಿತ್ರ ನಿರ್ಮಾಪಕರು ತಮ್ಮ ಹೆಸರುಗಳನ್ನು ಚೇಂಜ್ ಮಾಡಿದ್ದಾರೆ.
ಆಯುಷ್ಮಾನ್ ಖುರಾನಾ ಅವರಂತಹ ತಾರೆಯರು ತಮ್ಮ ಹೆಸರಿನ ಮುಂದೆ N ಮತ್ತು R ಸೇರಿಸುವ ಮೂಲಕ ಬದಲಾಯಿಸಿಕೊಂಡರು. ಆದರೆ ಹಿಂದೆ ರಾಜ್‌ಕುಮಾರ್ ಯಾದವ್ ಎಂದು ಕರೆಯಲ್ಪಡುತ್ತಿದ್ದ ರಾಜ್‌ಕುಮಾರ್ ರಾವ್ ಅವರು ಹೆಚ್ಚುವರಿ ‘M’ ಸೇರಿಸುವ ಮೂಲಕ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಇದೀಗ ಅಲ್ಲು ಅರ್ಜುನ್ ಕೂಡ ಬದಲಾವಣೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.