ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜಯ್ ರಾವ್ ನಟನೆ ಮಾಡಿ, ನಿರ್ಮಿಸಿರುವ ಯುದ್ಧಕಾಂಡ ಚಿತ್ರ ಇದೇ ಏಪ್ರಿಲ್-18 ರಂದು ತೆರೆಗೆ ಬರಲಿದೆ. ಇಂದು ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಈ ಕಾರ್ಯಕ್ರಮಕ್ಕೆ ಬಂದ ಕ್ರೇಜಿ ಸ್ಟಾರ್ ರವಿಚಂದ್ರನ್ ಇಡೀ ಚಿತ್ರದ ಕೆಲಸವನ್ನ ತುಂಬಾನೆ ಮೆಚ್ಚಿಕೊಂಡಿದ್ದಾರೆ.
ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ರವಿಚಂದ್ರನ್, ಟ್ರೈಲರ್ ನೋಡಿದ್ರೆ ಸಿನಿಮಾದಲ್ಲಿ ಸಾಕಷ್ಟು ವಿಷಯ ಇದೆ ಅನಿಸುತ್ತಿದೆ. ಅಷ್ಟೆ ಅಲ್ಲ, ಚಿತ್ರದಲ್ಲಿ ಶ್ರಮ ಕೂಡ ಇದೆ. ಅದು ಸಿನಿಮಾದ ಈ ಟ್ರೈಲರ್ ನಲ್ಲಿಯೇ ಕಾಣಿಸುತ್ತಿದೆ.
ಅಜಯ್ ರಾವ್ ಅವರಲ್ಲಿ ನನ್ನ ನಾನು ಕಾಣುತ್ತಿದ್ದೇನೆ. ಹಾಗೇನೆ ಈ ಒಂದು ಸಿನಿಮಾಕ್ಕೆ ಅಜಯ್ ಸಾಕಷ್ಟು ಕೆಲಸ ಮಾಡಿದ್ದಾರೆ. ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅರ್ಧ ಭಾಗ ಪವನ್ ಭಟ್ ಡೈರೆಕ್ಷನ್ ಮಾಡಿದ್ದಾರೆ. ಆದರೆ, ಇನರ್ಧ ಚಿತ್ರವನ್ನ ಅಜಯ್ ರಾವ್ ಸಹ ಡೈರೆಕ್ಷನ್ ಮಾಡಿದ್ದಾರೆ. ಹಾಗಾಗಿ ಈ ಚಿತ್ರದ ಕ್ರೆಡಿಟ್ ಅನ್ನು ಇಬ್ಬರಿಗೂ ಕೊಡುತ್ತೇನೆ ಎಂದು ರವಿಚಂದ್ರನ್ ಸ್ಟೇಜ್ ಮೇಲೇನೆ ಹೇಳಿದ್ದಾರೆ.
ಕೆಜಿಎಫ್ ಚಿತ್ರದಲ್ಲಿ ಒಂದು ಕಡೆಗೆ ಯಶ್ ಇದ್ದಾರೆ. ಮತ್ತೊಂದು ಕಡೆಗೆ ಅಮ್ಮನ ಪಾತ್ರಧಾರಿ ಅರ್ಚನಾ ಜೋಯಿಸ್ ಇದ್ದಾರೆ. ಇವರನ್ನ ಮರೆಯೋಕೆ ಆಗುತ್ತಾ ಹೇಳಿ? ಹಾಗೆ ಯುದ್ಧಕಾಂಡ ಸಿನಿಮಾದಲ್ಲೂ ಅರ್ಚನಾ ಜೋಯಿಸ್ ತುಂಬಾನೆ ಚೆನ್ನಾಗಿಯೇ ಕೆಲಸ ಮಾಡಿದ್ದಾರೆ ಅಂತಲೂ ಕ್ರೇಜಿ ಸ್ಟಾರ್ ರವಿಚಂದ್ರನ್ ಹೊಗಳಿದ್ದಾರೆ.