ನಿಯಂತ್ರಣ ತಪ್ಪಿ ಸಿಟಿ ಬಸ್‌ ಅಪಘಾತ; ಸ್ಥಳದಲ್ಲೇ ನಾಲ್ವರು ಸಾವು, ನಾಲ್ವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ವಹಿಸುತ್ತಿದ್ದ ಸಿಟಿ ಬಸ್ ಭೀಕರ ರಸ್ತೆ ಅಪಘಾತಕ್ಕೀಡಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬುಧವಾರ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಳಗ್ಗೆ ಎಂದಿನಂತೆ ರಸ್ತೆಗಿಳಿದಿದ್ದ ಬಸ್​ ವಾಹನಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಯಲ್ಲಿ ಯಾವುದೇ ನಿಯಂತ್ರಣವಿಲ್ಲದೇ ಚಲಾಯಿಸಿದ ಪರಿಣಾಮ, ಬಸ್​ ಪಕ್ಕದಲ್ಲಿ ಸಾಗುತ್ತಿದ್ದ ಎರಡು ರಿಕ್ಷಾ ಹಾಗೂ 7-8 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದ್ವಿಚಕ್ರ ಮತ್ತು ತ್ರಿ ಚಕ್ರ ವಾಹನ ಚಾಲಕರು ರಸ್ತೆ ಮೇಲೆ ಬಿದ್ದಿದ್ದು, ಅವರ ಮೇಲೆ ವಾಹನ ಹರಿದು ಹೋಗಿದೆ.

ಘಟನೆಯಲ್ಲಿ ಇಬ್ಬರು ಪುರುಷ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 4 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಬುಧವಾರ ಜನರು ಆಫೀಸ್​ಗೆ ಹೋಗುವ ಧಾವಂತದಲ್ಲಿದ್ದಾಗ ಇಂದಿರಾ ವೃತ್ತದ ಬಳಿ ಬಂದ ಬಸ್​ ಟ್ರಾಫಿಕ್​ ಸಿಗ್ನಲ್​ ಬಿಟ್ಟಾಕ್ಷಣ ಮಾಟೇಲಾ ಕಡೆಯಿಂದ ವೇಗವಾಗಿ ನುಗ್ಗಿದೆ. ಪರಿಣಾಮ ಬಸ್​ ಪಕ್ಕದಲ್ಲಿ ಚಲಿಸುತ್ತಿದ್ದ ಸವಾರರು ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

35 ವರ್ಷದ ರಾಜುಭಾಯಿ ಗಿಡಾ, 35 ವರ್ಷದ ಲಾಲೋ ಅಲಿಯಾಸ್​ ಚಿನ್ಮಯ್​ ಹರ್ಷದ್​ಬಾಯ್​ ಭಟ್​ , 55 ವರ್ಷದ ಕಿರಣ್ ಚಂದ್ರೇಶ್‌ಭಾಯ್ ಕಕ್ಕರ್, 40 ವರ್ಷ ಸಂಗೀತಾಬೆನ್ ಚೌಧರಿ ಸ್ಥಳದಲ್ಲಿ ಸಾವನ್ನಪ್ಪಿದವರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!