ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಅಂದ್ರೆನೆ ಹಬ್ಬಗಳ ಅಖಾಡ. ಈಗ ಶ್ರೀರಾಮನವಮಿ ಬರ್ತಿದೆ, ಈ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗಬಾರದು ಅಂತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಒಂದು ಇಂಪಾರ್ಟೆಂಟ್ ನೋಟಿಸ್ ಕೊಟ್ಟಿದೆ.
ಬರೋ ಮಾರ್ಚ್ 27, ಶುಕ್ರವಾರ, ರಾಮನವಮಿ ಪ್ರಯುಕ್ತ ಸಿಟಿಯಾದ್ಯಂತ ಮಾಂಸ ಮಾರಾಟಕ್ಕೆ ಫುಲ್ ಬ್ರೇಕ್ ಹಾಕಲಾಗಿದೆ. ಅಂದು ಕಸಾಯಿಖಾನೆಗಳು ಮಾತ್ರವಲ್ಲ, ಗಲ್ಲಿ ಗಲ್ಲಿಯ ಚಿಕನ್-ಮಟನ್ ಅಂಗಡಿಗಳೂ ಬಾಗಿಲು ಹಾಕಿರಬೇಕು ಅಂತ ಪಶುಸಂಗೋಪನಾ ಇಲಾಖೆ ಆರ್ಡರ್ ಮಾಡಿದೆ.
ಮಾರ್ಚ್ 27, ಇಡೀ ದಿನ ಚಿಕನ್, ಮಟನ್ ಹಾಗೂ ಯಾವುದೇ ರೀತಿಯ ಮಾಂಸದ ಮಾರಾಟ ಇರೋದಿಲ್ಲ. ಬೆಂಗಳೂರು ವ್ಯಾಪ್ತಿಯ ಎಲ್ಲಾ ಸಣ್ಣ-ದೊಡ್ಡ ಅಂಗಡಿಗಳು ಮತ್ತು ಔಟ್ಲೆಟ್ಗಳಿಗೆ ಈ ನಿಯಮ ಅನ್ವಯವಾಗುತ್ತೆ.
ಹಬ್ಬದ ಪವಿತ್ರತೆ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ ಅಲ್ವಾ? ಹಾಗಾಗಿ ಎಲ್ಲರೂ ಈ ನಿಯಮ ಪಾಲಿಸಿ ಅಂತ ಅಧಿಕಾರಿಗಳು ಕೇಳಿಕೊಂಡಿದ್ದಾರೆ. ಒಂದು ವೇಳೆ ಯಾರಾದರೂ “ನಮಗೇನು ಬಿಡಿ” ಅಂತ ರೂಲ್ಸ್ ಬ್ರೇಕ್ ಮಾಡಿದ್ರೆ, ಕಾನೂನು ಕ್ರಮ ಪಕ್ಕಾ ಅಂತ ಎಚ್ಚರಿಸಿದ್ದಾರೆ.



