ರಾಹುಲ್‌ ಗಾಂಧಿ ಡ್ರಗ್‌ ಅಡಿಕ್ಟ್‌ ಅಂತ ಸಿಟಿ ರವಿ ಹೇಳಿದ್ದಾರೆ, ಅದನ್ನೂ ಪರಿಶೀಲನೆ ಮಾಡ್ತೇವೆ: ಪರಮೇಶ್ವರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿ.ಟಿ.ರವಿ ಅವರು ರಾಹುಲ್ ಗಾಂಧಿಗೂ ಡ್ರಗ್ ಅಡಿಕ್ಟ್ ಅಂದಿದ್ದಾರೆ, ಅದನ್ನೂ ಪರಿಶೀಲಿಸ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಆರೋಪ ಸಂಬಂಧ ಅವರು ಪ್ರತಿಕ್ರಿಯಿಸಿದರು.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ”ಮೂಲತಃ ಇದು ಅವರು ಬೈದಿದ್ದಕ್ಕೆ ಶುರುವಾಯ್ತು. ಹಿರಿಯ ಜನಪ್ರತಿನಿಧಿ ಆಗಿ ಅವರು ಬೈದಿದ್ದು ಸರಿಯಲ್ಲ. ಅವರು ಏಕೆ ಬೈಯಬೇಕಿತ್ತು? ಸಿ.ಟಿ.ರವಿ ಆ ಪದ ಹೇಳಿದ್ದಾರೆ” ಎಂದು ಟೀಕಿಸಿದರು.

”ಸಿ.ಟಿ.ರವಿಯನ್ನು ರಾತ್ರಿ ಎಲ್ಲ ಸುತ್ತಾಡಿಸಿರುವುದು ನಮಗೆ ಗೊತ್ತಿಲ್ಲ. ಬಂಧಿಸಿರುವುದು ಗೊತ್ತು. ಪೊಲೀಸರು ಕೆಲವೊಂದನ್ನು ಅವರ ಮಿತಿಯಲ್ಲೇ ಮಾಡುತ್ತಾರೆ‌. ಪೊಲೀಸರು ಎಲ್ಲವನ್ನೂ ಕೇಳಿ ಮಾಡಲ್ಲ. ಇವತ್ತು ಕೋರ್ಟಿಗೆ ಹಾಜರುಪಡಿಸ್ತಾರೆ. ಆ ಸಂದರ್ಭಕ್ಕೆ ಏನು ಮಾಡಬೇಕೋ ಅದನ್ನು ಪೊಲೀಸರು ಮಾಡುತ್ತಾರೆ‌. ಸಿ.ಟಿ.ರವಿ ತಲೆಗೆ ಪೆಟ್ಟು ಬಿದ್ದಿರುವುದು ಗೊತ್ತಿಲ್ಲ. ಪೊಲೀಸ್ ಮಾಹಿತಿಗಳು ರಹಸ್ಯ, ಬಯಲು ಮಾಡಲು ಆಗಲ್ಲ. ಕೆಲವು ವಿಚಾರ ನಿಮಗೆ ಹೇಳಲು ಆಗಲ್ಲ” ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!