Friday, December 19, 2025

ಸುಪ್ರೀಂಕೋರ್ಟ್‌ನಲ್ಲಿ ತಮ್ಮತ್ತ ಶೂ ಎಸೆದಿದ್ದವರನ್ನು ಕ್ಷಮಿಸಿದ ಸಿಜೆಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸುಪ್ರೀಂ ಕೋರ್ಟ್ ಒಳಗೆ ಸಿಜೆಐ ನ್ಯಾ.ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲನನ್ನು ಸ್ವತಃ ನ್ಯಾಯಮೂರ್ತಿಗಳೇ ಕ್ಷಮಿಸಿದ್ದಾರೆ.

ತಮ್ಮ ಮೇಲೆ ಶೂ ಎಸೆದ ರಾಜೇಶ್ ಕಿಶೋರ್ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಡಿ. ಆತನನ್ನ ಬಿಟ್ಟು ಮನೆಗೆ ಕಳಿಸಿಬಿಡಿ ಎಂದು ಸಿಜೆಐ ಸುಪ್ರೀಂಕೋರ್ಟ್ ನ ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ. ಈ ಕಾರಣದಿಂದ ರಾಜೇಶ್ ಕಿಶೋರ್ ರನ್ನು ಬಿಟ್ಟು ಕಳಿಸಲಾಗಿದೆ.

ಮತ್ತೊಂದೆಡೆ ತಾವು ಮಾಡಿದ ಕೃತ್ಯಕ್ಕೆ ವಿಷಾದವಿಲ್ಲ ಎಂದು ವಕೀಲ ರಾಜೇಶ್ ಕಿಶೋರ್ ಹೇಳಿದ್ದಾರೆ. ನಾನು ಅದನ್ನು ಮಾಡಲಿಲ್ಲ; ದೇವರು ಅದನ್ನು ಮಾಡಿದ್ದಾನೆ. ಭಾರತದ ಮುಖ್ಯ ನ್ಯಾಯಮೂರ್ತಿ ಸನಾತನ ಧರ್ಮವನ್ನು ಅಪಹಾಸ್ಯ ಮಾಡಿದ್ದಾರೆ. ಇದು ಸರ್ವಶಕ್ತನ ಆದೇಶ, ಒಂದು ಕ್ರಿಯೆಗೆ ಪ್ರತಿಕ್ರಿಯೆ ಎಂದು ರಾಜೇಶ್ ಕಿಶೋರ್ ಹೇಳಿದ್ದಾರೆ.

error: Content is protected !!