August 26, 2026
Wednesday, August 26, 2026
spot_img

ವಿದ್ಯಾರ್ಥಿಗಳ ಬಂಧನಕ್ಕೆ CJP ಆಕ್ರೋಶ: ಕೇಂದ್ರದ ಭರವಸೆ ಉಲ್ಲಂಘನೆಗೆ ತೀವ್ರ ಖಂಡನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಪೊಲೀಸರು ಕೈಗೊಂಡಿರುವ ಕಠಿಣ ಕ್ರಮ ಹಾಗೂ ಅಕ್ರಮ ಬಂಧನವನ್ನು CJP ತೀವ್ರವಾಗಿ ಖಂಡಿಸಿದೆ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಅಡಗಿಸುವ ಈ ಪೋಲಿಸ್ ದೌರ್ಜನ್ಯವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಪಕ್ಷವು ಆಕ್ರೋಶ ಹೊರಹಾಕಿದೆ.

ಭರವಸೆ ಮೀರಿದ ಆಡಳಿತ ವ್ಯವಸ್ಥೆ

ಯಾವುದೇ ರೀತಿಯ ಕಾನೂನಾತ್ಮಕ ಅಥವಾ ಶಿಸ್ತುಕ್ರಮಗಳನ್ನು ವಿದ್ಯಾರ್ಥಿಗಳ ವಿರುದ್ಧ ಜಾರಿಗೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರ ಮುಂಚಿತವಾಗಿ ಭರವಸೆ ನೀಡಿತ್ತು. ಆದರೆ, ಈಗ ರಾಜ್ಯ ಪೊಲೀಸರು ಈ ಮಾತಿಗೆ ತદ્ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಯುವಜನತೆಯ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ.

ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರನ್ನು ಬಂಧಿಸುವ ಹಾಗೂ ದಮನ ಮಾಡುವ ಈ ನೀತಿಯನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಬಂಧಿತ ವಿದ್ಯಾರ್ಥಿಗಳನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು ಎಂದು CJP ಆಗ್ರಹಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !