ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕನೇ ತರಗತಿಯಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿ ತಮ್ಮ 69 ವಯಸ್ಸಿನಲ್ಲಿ ‘ಸಹಪಾಠಿ’ಗಳಿಬ್ಬರು ಬಡಿದಾಡಿಕೊಂಡ ವಿಲಕ್ಷಣ ಘಟನೆ ಕೇರಳದ ವೆಳ್ಳರಿಕುಂಡಿನಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ.
ಏನಿದು ಘಟನೆ?
ಬಾಲಕೃಷ್ಣನ್ ಹಾಗೂ ಮ್ಯಾಥ್ಯೂ ಹೊಡೆದಾಟ ನಡೆಸಿದವರಾಗಿದ್ದು, ಬಾಬು ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಬಾಬು ಹಾಗೂ ಬಾಲಕೃಷ್ಣನ್ ನಡುವೆ ನಾಲ್ಕನೇ ತರಗತಿಯಲ್ಲಿ ಯಾವುದೋ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆದಿತ್ತು. ಅದಾದಗಿ ಕೆಲವು ದಿನಗಳ ಹಿಂದೆ ಅವರು ಪರಸ್ಪರ ಭೇಟಿಯಾಗಿದ್ದು, ಈ ವೇಳೆ ಅಂದಿನ ಪ್ರಸ್ತಾಪವಾಗಿದೆ. ಇದು ವಿಕೋಪಕ್ಕೆ ತಿರುಗಿ ವಾಗ್ವಾದ ನಡೆದಿದ್ದು, ಅಂದು ಸ್ಥಳೀಯರು ಇವರನ್ನು ಸಮಾಧಾನ ಪಡಿಸಿ ಜಗಳ ನಿಲ್ಲಿಸಿದ್ದರು. ಅದಾಗಿ ಮೂರನೇ ದಿನಕ್ಕೆ ಇವರು ವೆಳ್ಳರಿಕುಂಡು ಪೇಟೆಯಲ್ಲಿ ಮುಖಾಮುಖಿಯಾಗಿದ್ದು, ಹಳೇ ದ್ವೇಷದ ಹೆಸರಲ್ಲಿ ಹೊಡೆದಾಡಿಕೊಂಡಿದ್ದಾರೆ. ಬಿಡಿಸಲು ಯತ್ನಿಸಿದ ಬಾಬು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ