ಹೊಸ ಇತಿಹಾಸ ಬರೆದ ಕ್ಲೌಡಿಯಾ ಶೇನ್​ಬಾಮ್: ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮೆಕ್ಸಿಕೋ ಅಧ್ಯಕ್ಷೀಯ ಚುನಾವಣೆಯಲ್ಲಿ ಕ್ಲೌಡಿಯಾ ಶೇನ್​ಬಾಮ್​ ಭಾರೀ ಅಂತರದಿಂದ ಜಯಗಳಿಸಿ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದಾರೆ.

ಮೆಕ್ಸಿಕೋ ದೇಶದ 200 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಚುನಾಯಿತ ಅಧ್ಯಕ್ಷರಾಗುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

ಶೇನ್​ಬಾಮ್​ 58.3 ರಿಂದ 60.7 ಪ್ರತಿಶತದಷ್ಟು ಮತಗಳನ್ನು ಪಡೆದು ವಿಜಯವನ್ನು ಸಾಧಿಸಿದ್ದಾರೆ ಎಂದು ಮೆಕ್ಸಿಕೋದ ಚುನಾವಣಾ ಸಂಸ್ಥೆಯು ಘೋಷಿಸಿತು.

‘ನಾನು ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗುತ್ತೇನೆ. ಮೆಕ್ಸಿಕೋ ಶಾಂತಿಯುತ ಚುನಾವಣೆಗಳೊಂದಿಗೆ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ನಾವು ತೋರಿಸಿದ್ದೇವೆ. ಇತರ ಸಂದರ್ಭಗಳಲ್ಲಿ ಹೇಳಿದಂತೆ, ನಾನು ಒಬ್ಬಂಟಿಯಾಗಿ ಬರುವುದಿಲ್ಲ. ನಮ್ಮ ತಾಯ್ನಾಡನ್ನು ನಮಗೆ ನೀಡಿದ ನಮ್ಮ ನಾಯಕಿಯರು, ನಮ್ಮ ತಾಯಂದಿರು, ನಮ್ಮ ಹೆಣ್ಣುಮಕ್ಕಳು ನಾವೆಲ್ಲರೂ ಒಟ್ಟಿಗೆ ಬಂದಿದ್ದೇವೆ’ ಎಂದು ಶೇನ್​ಬಾಮ್ ಹೇಳಿದರು.

ವಿರೋಧ ಪಕ್ಷದ ಸೆನೆಟರ್ ಮತ್ತು ಟೆಕ್ ಉದ್ಯಮಿಯಾದ ಮಾಜಿ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಸ್ಥಾನವನ್ನು ಶೇನ್‌ಬಾಮ್ ಅಲಂಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!