ಪ್ರತಿಯೊಬ್ಬರೂ ಶುದ್ಧ ಹಾಗೂ ಸ್ವಚ್ಛ ಮನೆಯಲ್ಲಿ ವಾಸಿಸಲು ಇಷ್ಟಪಡ್ತಾರೆ. ಆದರೆ ದಿನನಿತ್ಯದ ಕೆಲಸಗಳಲ್ಲಿ ನಿರಂತರವಾಗಿ ಸ್ವಚ್ಛತೆ ಕಾಯ್ದುಕೊಳ್ಳುವುದು ಸವಾಲಿನ ವಿಷಯವಾಗಬಹುದು. ಈ ಸಮಸ್ಯೆಗೆ ಪರಿಹಾರವಾಗಿ ಕೆಲವು ಸರಳ ಮತ್ತು ಪರಿಣಾಮಕಾರಿ ಕ್ಲೀನಿಂಗ್ ಟಿಪ್ಸ್‌ಗಳು ಇಲ್ಲಿವೆ.
ನಿಂಬೆಹಣ್ಣು ಮತ್ತು ಬೇಕಿಂಗ್ ಸೋಡಾ
ನಿಂಬೆಹಣ್ಣು ಮತ್ತು ಬೇಕಿಂಗ್ ಸೋಡಾದ ಮಿಶ್ರಣ ಕಿಚನ್ ಸಿಂಕ್ ನ ಎಣ್ಣೆ ಅಂಶ ಮತ್ತು ದುರ್ಗಂಧವನ್ನು ತೆಗೆದುಹಾಕುತ್ತದೆ. ಇದು ನೈಸರ್ಗಿಕ ಕ್ಲೀನರ್ ಆಗಿದ್ದು, ಕಠಿಣ ರಾಸಾಯನಿಕಗಳನ್ನು ಬಳಸುವ ಅಗತ್ಯಾನೇ ಇರೋದಿಲ್ಲ.
ಮೈಕ್ರೋಫೈಬರ್ ಬಟ್ಟೆ ಬಳಸಿ ಧೂಳು ತೆಗೆಯಿರಿ
ಮೈಕ್ರೋಫೈಬರ್ ಬಟ್ಟೆ ಅಥವಾ ಗ್ಲವ್ಸ್ ಗಳನ್ನೂ ಧರಿಸಿ, ಟಿವಿ, ಫರ್ನಿಚರ್ ಅಥವಾ ಟೋಯ್ಸ್ ಗಳ ಮೇಲಿನ ಧೂಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದು ಇಲೆಕ್ಟ್ರಾನಿಕ್ ಸಾಧನಗಳಿಗಿಂತಲೂ ಸುರಕ್ಷಿತ.
ಲಿಂಟ್ ರೋಲರ್ ಬಳಸಿ ಸೋಫಾ ಮತ್ತು ಕಾರ್ಪೆಟ್ ಕ್ಲೀನ್ ಮಾಡುವುದು
ಪೆಟ್ ಹೇರ್ ಅಥವಾ ಸಣ್ಣ ಧೂಳುಗಳನ್ನು ಲಿಂಟ್ ರೋಲರ್ ನಿಂದ ಸುಲಭವಾಗಿ ಸಿಳೀನ್ ಮಾಡಬಹುದು. ಇದು ತಕ್ಷಣದ ಕ್ಲೀನಿಂಗ್‌ಗೆ ಬಹಳ ಉಪಯುಕ್ತ.
ನ್ಯೂಸ್ ಪೇಪರ್ ಬಳಸಿಕೊಂಡು ಕಿಟಕಿ ಗಾಜು ಹೊಳಪಿಸಲು
ನ್ಯೂಸ್ ಪೇಪರ್ ಜೊತೆಗೆ ಗಾಜು ಕ್ಲೀನರ್ ಹಚ್ಚಿ ಕಿಟಕಿಗಳ ಅಥವಾ ಗ್ಲಾಸ್ ಡೋರ್ ಗಳನ್ನು ತೊಳೆಯುವುದರಿಂದ ಗಾಜುಗಳಲ್ಲಿ ಯಾವುದೇ ಕಲೆಗಳು ಉಳಿಯುವುದಿಲ್ಲ.
ಬೇಕಿಂಗ್ ಸೋಡಾ ಹಾಕಿ ಬೆಡ್ ಅಥವಾ ಸೋಫಾ ಕ್ಲೀನ್ ಮಾಡಿ
ಬೇಕಿಂಗ್ ಸೋಡಾ ದುರ್ಗಂಧ ಮತ್ತು ತೇವವನ್ನು ಹೀರಿಕೊಳ್ಳುತ್ತದೆ. ಇದನ್ನು ಬೆಡ್ ಅಥವಾ ಸೋಫಾ ಮೇಲೆ ಉದುರಿಸಿ ಕೆಲ ನಿಮಿಷಗಳು ಬಿಡಿ, ನಂತರ ವಾಕ್ಯೂಮ್ ಮಾಡಿದರೆ ಸ್ವಚ್ಛತೆ ಬೆಡ್ ಅಥವಾ ಸೋಫಾ ಸ್ವಚಗೊಳ್ಳುತ್ತದೆ.
ಈ ಸುಲಭ ಹ್ಯಾಕ್ಸ್‌ಗಳನ್ನು ಪಾಲಿಸಿ ನಿಮ್ಮ ಮನೆಗೆ ದಿನವೂ ಹೊಸದಾಗಿ ಹೊಳೆಯುವ ಲುಕ್ ನೀಡಬಹುದು.