ಫ್ಯಾನ್ ಮೇಲಿನ ಧೂಳು ಕೇವಲ ಗಾಳಿಯ ಹರಿವನ್ನು ತಗ್ಗಿಸುವುದಲ್ಲದೆ, ಮನೆ ಒಳಗಿನ ವಾತಾವರಣವನ್ನು ಅಲರ್ಜಿ ಮತ್ತು ಸ್ಕಿನ್ ಸಮಸ್ಯೆಗಳಿಗೆ ಕಾರಣವಾಗಿಸಬಹುದು. ಅನೇಕರು ಫ್ಯಾನ್ ಕ್ಲೀನ್ ಮಾಡುವ ಕೆಲಸವನ್ನು ಕಷ್ಟಕರವೆಂದು ಭಾವಿಸುತ್ತಾರೆ. ಇವತ್ತು ಇಲ್ಲಿ ಸುಲಭವಾಗಿ ಕ್ಲೀನ್ ಮಾಡೋದು ಹೇಗೆ ಅಂತ ನೋಡೋಣ.
ಫ್ಯಾನ್ ಕ್ಲೀನ್ ಮಾಡುವ ಮೊದಲು, ಫ್ಯಾನ್ ಸ್ವಿಚ್ ಆಫ್ ಮಾಡುವುದು ಮತ್ತು ಸಾಧ್ಯವಾದರೆ MCB ಅನ್ನು ನಿಷ್ಕ್ರಿಯಗೊಳಿಸುವುದು ಅಗತ್ಯ. ಇದರಿಂದ ಯಾವುದೇ ವಿದ್ಯುತ್ ಅಪಾಯದಿಂದ ರಕ್ಷಿಸಿಕೊಳ್ಳಬಹುದು. ಫ್ಯಾನ್ ಸಂಪೂರ್ಣ ನಿಂತ ನಂತರ ಮಾತ್ರ ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಬೇಕು.
- ಧೂಳನ್ನು ಹೀಗೆ ತೆಗೆಯಿರಿ: ಹಳೆಯ ದಿಂಬಿನ ಕವರ್ ಅನ್ನು ಫ್ಯಾನ್ ಬ್ಲೇಡ್‌ಗಳ ಒಳಗೆ ಹಾಕಿ ಒರೆಸಿ. ಈ ವಿಧಾನವು ಧೂಳನ್ನು ತೆಗೆಯುವ ಮೂಲಕ, ಮನೆಯ ಸುತ್ತಲೂ ಹರಡುವುದನ್ನು ತಡೆಯುತ್ತದೆ. ಇದು ಸುರಕ್ಷಿತವಾಗಿದ್ದು, ಕಣ್ಣು ಅಥವಾ ಕೂದಲು ಮೇಲೆ ಹಾನಿ ಮಾಡುವುದಿಲ್ಲ.
- ಉಳಿದ ಕೊಳೆಯನ್ನು ಕಾಟನ್ ಬಟ್ಟೆಯಿಂದ ಒರೆಸುವುದು: ಬ್ಲೇಡ್ ಮೇಲ್ಭಾಗದ ಉಳಿದ ಕೊಳೆಯನ್ನು ಸ್ವಚ್ಛಗೊಳಿಸಲು, ಕಾಟನ್ ಬಟ್ಟೆಯನ್ನು ಬಳಸಬಹುದು. ಫ್ಯಾನ್ ಮೋಟಾರ್ ಮೇಲ್ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶವೂ ಸ್ವಚ್ಛಗೊಳಿಸುವುದು ಮುಖ್ಯ.
- ಬಿಸಿನೀರು ಮತ್ತು ಶಾಂಪೂ ಬಳಸಿ ಡೀಪ್ ಕ್ಲೀನಿಂಗ್: ಒಂದು ಮಗ್ ಬಿಸಿನೀರು ಮತ್ತು ಶಾಂಪೂ ಬೆರೆಸಿ ದ್ರಾವಣ ತಯಾರಿಸಿ. ಹತ್ತಿ ಬಟ್ಟೆಯೊಂದಿಗೆ ಬ್ಲೇಡ್ ಮೇಲೆ ಹಚ್ಚಿ, ಹಳೆಯ ಕೊಳೆಯನ್ನು ಕರಗಿಸಲು ಸರಿಯಾಗಿ ಉಜ್ಜಿ ಒರೆಸಿ. ಅಗತ್ಯವಿದ್ದರೆ ಲಿಕ್ವಿಡ್ ಸೋಪ್ ಬಳಸಿ.
ಈ ವಿಧಾನವು ಫ್ಯಾನ್ ಬ್ಲೇಡ್‌ಗಳನ್ನು ಹೊಸತರಂತೆ ಹೊಳೆಯುವಂತೆ ಮಾಡುತ್ತದೆ. ಫ್ಯಾನ್ ತಿರುಗಿದಾಗ ಗಾಳಿಯ ಹರಿವು ವೇಗವಾಗಿ ಬರುತ್ತದೆ ಮತ್ತು ಮನೆಯ ವಾತಾವರಣವು ತಾಜಾ ಹಾಗೂ ಧೂಳರಹಿತವಾಗಿರುತ್ತದೆ.