ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರುನಗರದಲ್ಲಿ ರಾಜಕಾಲುವೆ ಒತ್ತುವರಿಯನ್ನು ಎಷ್ಟೇ ಪ್ರಭಾವಿಗಳು ಮಾಡಿದ್ದರೂ,ಮುಲಾಜಿಲ್ಲದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, ಮೊದಲಿಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಪರಿಶೀಲನೆ ಮಾಡಿದೆವು. ಅಲ್ಲಿ ರಾಜಕಾಲುವೆ ಒತ್ತುವರಿ ಆಗಿದೆ. ಕೂಡಲೇ ತೆರವಿಗೆ ಸೂಚನೆ ನೀಡಿದ್ದೇನೆ. ಎರಡನೆ ಜಾಗ ಹೆಚ್‌ಬಿಆರ್ ಬಡಾವಣೆ 5ನೇ ಹಂತದಲ್ಲಿ ರಾಜಕಾಲುವೆ ಸಮಸ್ಯೆ ಇದೆ. ಅಲ್ಲಿ ರಾಜಕಾಲುವೆ ತಡೆಗೋಡೆ ನಿರ್ಮಾಣ ಆಗ್ತಿದೆ. ದಬರಿಸ್ ಚರಂಡಿಗೆ ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಒತ್ತುವರಿ ಮುಲಾಜಿಲ್ಲದೇ ತೆರವು ಆಗಬೇಕು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾಯಿ ಬಡಾವಣೆಯು ರಾಜಕಾಲುವೆಗಿಂತ ತಗ್ಗು ಪ್ರದೇಶದಲ್ಲಿ ಇದೆ. ಹಾಗಾಗಿ, ನೀರು ಸರಾಗವಾಗಿ ಹರಿಯುತ್ತಿಲ್ಲ. ರೈಲ್ವೆ ಹಳಿಯ ಹತ್ತಿರ ವೆಂಡ್ ದೊಡ್ಡದಿಲ್ಲ. ಆದ್ದರಿಂದ ನೀರು ತುಂಬುತ್ತಿದೆ. ಬ್ಯಾಕ್ ವಾಟರ್ ಬರುತ್ತಿರುವುದರಿಂದ ಅನೇಕ ವರ್ಷದಿಂದ ಸಮಸ್ಯೆ ಆಗಿದೆ. ವೆಂಡ್ಸ್ ಅಗಲ ಮಾಡಲು 2 ಅಡೀಶನಲ್ ವೆಂಡ್ಸ್ ಮಾಡಲು ಸೂಚನೆ ನೀಡಲಾಗಿದೆ. ಅದಕ್ಕೆ 13 ಕೋಟಿ ಹಣ ರಿಲೀಸ್ ಮಾಡಲಾಗಿದೆ ಎಂದು ತಿಳಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ನಾಲ್ಕು ಕಡೆಯಿಂದ ನೀರು ಬರ್ತಿದೆ. ಅವೆಲ್ಲಾ ಸೇರಿಕೊಂಡು ಹೆಚ್‌ಎಸ್‌ಆರ್ ಲೇಔಟ್‌ಗೆ ಹೋಗುತ್ತೆ. ನೀರು ಹೆಚ್ಚಾದಾಗ ಉಕ್ಕಿ ಹರಿದು ಸಮಸ್ಯೆ ಆಗುತ್ತೆ. ಮೆಟ್ರೋ, ಬಿಬಿಎಂಪಿ, ನ್ಯಾಷನಲ್ ಹೈವೇ ಮೂರು ಜನ ಸೇರಿ ಮಾಡಬೇಕಿದೆ. ಗುರಪ್ಪನ ಪಾಳ್ಯದಲ್ಲಿ ತಡೆಗೋಡೆ ಕುಸಿದು ಮನೆಗಳಿಗೆ ನೀರು ನುಗ್ಗಿದೆ. ಜನಸಂದಣೆ ಜಾಸ್ತಿ ಇದ್ದು, ರಸ್ತೆಗಳು ಚಿಕ್ಕದಿವೆ. ಅಲ್ಲಿ ಎಷ್ಟು ನಷ್ಟ ಆಗಿದೆ, ಸರ್ವೆ ಮಾಡಿಸಿ ಪರಿಹಾರ ಕೊಡಲು ಹೇಳಿದ್ದೇನೆ. ಸಾಯಿ ಲೇಔಟ್ ಬೇರೆ ಕಡೆಯು ಪರಿಹಾರ ಕೊಡಲು ಹೇಳಿದ್ದೇನೆ. ಎಲ್ಲೆಲ್ಲಿ ನೀರು ನುಗ್ಗಿ ನಷ್ಟ ಆಗಿದೆ ಅಲ್ಲಿ ಪರಿಹಾರ ಕೊಡಲು ಹೇಳಿದ್ದೇನೆ ಎಂದು ತಿಳಿಸಿದರು.
ಬೇಸ್‌ಮೆಂಟ್‌ಗೆ ಪ್ಲಾನ್ ಅಪ್ರೂವಲ್ ಕೊಡಬೇಡಿ ಅಂತ ಬಿಬಿಎಂಪಿಗೆ ಹೇಳಿದ್ದೇನೆ. ಎಲ್ಲಾ ಕಡೆ ಅಲ್ಲ, ತಗ್ಗು ಪ್ರದೇಶ ಮಾತ್ರ. 10 ವರ್ಷದಲ್ಲಿ ಇದು ಎರಡನೇ ಬಾರಿ ಮಳೆ ಹೀಗೆ ಜಾಸ್ತಿ ಬಂದಿರುವುದು. 210 ತಗ್ಗು ಪ್ರದೇಶ ಇದೆ. 166 ಸೂಕ್ಷ್ಮ ಅತಿ ಸೂಕ್ಷ್ಮ ಇದೆ. 166 ಸರಿಪಡಿಸಿದ್ದಾರೆ. ಇನ್ನುಳಿದ ಕಡೆ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದರು.