ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾರ್ಚ್ 31 ವಾರ್ಷಿಕ ಲೆಕ್ಕಪತ್ರಗಳ ಕ್ಲೋಸಿಂಗ್ ದಿನವಾಗಿದ್ದು, ಹೀಗಾಗಿ ಮಾರ್ಚ್ 31ರ ಭಾನುವಾರದಂದು ದೇಶದ ಎಲ್ಲಾ ಬ್ಯಾಂಕ್‌ಗಳು ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಏಜೆನ್ಸಿ ಬ್ಯಾಂಕ್‌ಗಳು ಮಾರ್ಚ್ 31 ರಂದು ಸರ್ಕಾರಿ ವ್ಯವಹಾರಗಳನ್ನು ತೆರೆದಿಡಬೇಕು ಎಂದು ಆರ್‌ಬಿಐ ಪ್ರಕಟಣೆಯಲ್ಲಿ ಹೇಳಿದೆ
ಕೇಂದ್ರ ಸರ್ಕಾರ ಈ ಕುರಿತಾಗಿ ಆರ್‌ಬಿಐಗೆ ಮನವಿ ಮಾಡಿದ್ದು, ಸರ್ಕಾರಿ ವ್ಯವಹಾರಗಳನ್ನು ಹೊಂದಿರುವ ದೇಶದ ಎಲ್ಲಾ ಬ್ಯಾಂಕ್‌ಗಳು ಮಾರ್ಚ್ 31ರ ಭಾನುವಾರದಂದು ತೆರೆದಿರಬೇಕು ಎಂದು ಹೇಳಿದೆ. ಆ ಮೂಲಕ 2023-24ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಸರ್ಕಾರಿ ವ್ಯವಹಾರಗಳನ್ನು ಮುಗಿಸುವ ಇರಾದೆ ಹೊಂದಿದೆ. ಇದರಿಂದಾಗಿ ಸರ್ಕಾರಿ ವ್ಯವಹಾರಗಳನ್ನು ಹೊಂದಿರುವ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳು ಹಣಕಾಸು ವರ್ಷದ ಕೊನೆ ದಿನ ತೆರೆದಿರಲಿದೆ ಎಂದು ಆರ್‌ಬಿಐ ತಿಳಿಸಿದೆ.