ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಸಿರ್ಮೌರ್ ಗ್ರಾಮದ ಬಳಿ ಮೇಘಸ್ಫೋಟ ಸಂಭವಿಸಿದ್ದು, ಮನೆ ಕುಸಿದಿದೆ.
ಮನೆಯ ಅವಶೇಷಗಳಡಿ ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. ಪೋಂಟಾ ಸಾಹಿಬ್ ಪ್ರದೇಶದಲ್ಲಿ ರಾತ್ರಿ ಮೇಘಸ್ಫೋಟ ಸಂಭವಿಸಿ ಮನೆಗಳಿಗೆ ನೀರು ನುಗ್ಗಿದೆ.
ರಾತ್ರಿ ಸ್ಫೋಟ ಸಂಭವಿಸಿದ ಕಾರಣ ಮನೆಯಲ್ಲಿ ಎಲ್ಲರೂ ಮಲಗಿದ್ದರು ಎನ್ನಲಾಗಿದೆ. ಒಂದೇ ಕುಟುಂಬದವರಾದ ಸಿಂಗ್, ಜೀತೋ ದೇವಿ, ರಜನಿ,ನಿತೇಶ್ ಹಾಗೂ ದೀಪಿಕಾ ಮನೆಯ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.