ಹೊಸದಿಗಂತ ವರದಿ, ಬೀದರ್:
ಉತ್ತರ ಭಾರತದ ಹಿಮಾಚಲ ಪ್ರದೇಶದ ಮಾದರಿಯಲ್ಲಿ ಔರಾದ ವಿಧಾನಸಭಾ ಕ್ಷೇತ್ರದ ದಾಬಕಾ ಹಾಗೂ ಭಂಡಾರ ಕುಮಟಾ ಭಾಗದಲ್ಲಿ ಮೇಘ ಸ್ಪೋಟ ಸಂಭವಿಸಿದ್ದು. ನಿನ್ನೆ ಒಂದೇ ರಾತ್ರಿಯಲ್ಲಿ 309 ಮೀ.ಮೀ ಕುಂಭದ್ರೊಣ ಮಳೆ ದಾಖಲಾಗಿದೆ. ಬೀದರ್ ಜಿಲ್ಲೆಯ ಇತಿಹಾಸದಲ್ಲಿಯೆ ಇಷ್ಟೊಂದು ಮಳೆ ಎಂದು ಬಿದ್ದಿರಲಿಲ್ಲ. ಆಗಸ್ಟ ಹಾಗೂ ಸೆಪ್ಟೆಂಬರ್ ಎರಡು ತಿಂಗಳಲ್ಲಿ ಬಿಳಬೆಕಿದ್ದ ಮಳೆ ಕೆವಲ ಒಂದೇ ರಾತ್ರಿಯಲ್ಲಿ ಸುರಿದಿದ್ದರಿಂದ ತಾಲುಕಿನ ಬೊಂತಿ ಸೇರಿದಂತೆ ಅನೇಕ ಕೆರೆ ಕೊಡಿಗಳು ಒಡೆದಿದ್ದು ರೈತರ ಸಾವಿರಾರು ಎಕರೆ ಜಮೀನು ಜಲಾವ್ರತವಾಗಿ ಬೆಳೆಹಾನಿಯಾಗಿದೆ.
ಕಮಲನಗರ ತಾಲುಕಿನ ನಂದಿಬೀಜಲಗಾಂವ ಗ್ರಾಮದ ನೂರಾರು ಜಾನುವಾರುಗಳು ಮಳೆನೀರನಲ್ಲಿ ಕೊಚ್ಚಿಕೊಂಡು ಹೊಗಿ ಪ್ರಾಣಕಳೆದುಕೊಂಡಿವೆ. ರಸ್ತೆ ಹಾಗೂ ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡ ಹೊಗಿವೆ ಹಾಗೂ ಬಡವರ ಮನೆಗಳು ನೆಲಸಮವಾಗಿವೆ
ಆದ್ದರಿಂದ ಕಷ್ಟದಲ್ಲಿರುವ ಈ ಭಾಗದ ರೈತರು ಹಾಗೂ ಸಾರ್ವಜನಿಕರ ಸಹಾಯಕ್ಕೆ ಜಿಲ್ಲಾಢಳಿತ ಹಾಗೂ ಸರ್ಕಾರ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಇಬ್ಬರು ಸಚಿವರು ಅಲ್ಲಿಯೆ ಠಿಕಾಣೆಹೂಡಿ ಸಂತ್ರಸ್ತರಿಗೆ ಪರಿಹಾರ ಒದಗಿಸಕೂಡಬೇಕೆಂದು ಒತ್ತಾಯಿಸುತ್ತೇನೆ. ಅದೇ ರೀತಿ ಕಳೆದ ವರ್ಷದ ಪ್ರಧಾನಮಂತ್ರಿ ಫಸಲ ಬಿಮಾ ಯೊಜನೆಯಡಿ ಪಕ್ಕದ ಕಲಬುರ್ಗಿ ಜಿಲ್ಲೆಯ ರೈತರಿಗೆ 650 ಕೋಟಿ ಪರಿಹಾರ ದೂರಕಿದ್ದು ಇಗಾಗಲೆ ರೂ 325 ಕೋಟಿ ರೈತರ ಖಾತೆಗೆ ಜಮಾ ಆಗಿರುತ್ತದೆ. ಆದರೆ ಬೀದರ ಜಿಲ್ಲೆಯ ರೈತರಿಗೆ ಯಾವುದೆ ಪರಿಹಾರ ದೊರೆತಿಲ್ಲ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಜಿಲ್ಲೆಗೆ ಪರಿಹಾರ ದೊರೆಕಿಸಿ ಕೊಡಲು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಶ್ರಮಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರು ಪತ್ರಿಕಾ ಪ್ರಕಟಣೆಯ ಮುಖಾಂತರ ಒತ್ತಾಯಿಸಿದ್ದಾರೆ.