ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಾದ್ಯಂತ ಭಾರಿ ಮಳೆಯಾಗುತ್ತಿದೆ. ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹಾಗೆಯೇ ಆಗಸ್ಟ್ 13ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಸಿಂದಗಿ, ಹುಣಸಗಿ, ಗುರುಮಿಟ್ಕಲ್, ಅಫ್ಜಲ್ಪುರ, ಯಡ್ರಾಮಿ, ಮಂಕಿ, ಕುರ್ಡಿ, ಯಾದಗಿರಿ, ಶಾಹಪುರ, ಸೇಡಂ,ರಾಯಲ್ಪಾಡು, ಮಾನ್ವಿ, ಕುಂದಾಪುರ, ಕೋಟಾ, ಕೆಂಭಾವಿ, ಕಕ್ಕೇರಿ, ದೇವರಹಿಪ್ಪರಗಿ, ಚಿತ್ತಾಪುರ್, ಬೆಂಗಳೂರು ಕೆಐಎಎಲ್, ತಾವರಗೇರಾ, ಶಿರಾಲಿ, ಪರಶುರಾಂಪುರದಲ್ಲಿ ಮಳೆಯಾಗಿದೆ.
ನರಗುಂದ, ಮೈಸೂರು, ಜೇವರ್ಗಿ, ಹುಮ್ನಾಬಾದ್, ಹೊಸಕೋಟೆ, ಗೋಕರ್ಣ, ಗೇರುಸೊಪ್ಪ, ಬರಗೂರು, ಆಗುಂಬೆ, ವೈಎನ್ ಹೊಸಕೋಟೆ, ತಿಪಟೂರು, ಸಿದ್ದಾಪುರ, ರಾಯಚೂರು, ಮಿಡಿಗೇಶಿ, ಮದ್ದೂರು, ಕನಕಪುರ, ಕಮ್ಮರಡಿ, ಹಿರಿಯೂರು, ಗುಬ್ಬಿ, ಗೋಪಾಲ್ನಗರ, ಜಿಕೆವಿಕೆ, ಧರ್ಮಸ್ಥಳ, ಚಿಕ್ಕಬಳ್ಳಾಪುರ, ಜಿಕೆವಿಕೆ, ಬೆಂಗಳೂರು ನಗರ, ಬೀದರ್, ಬಾದಾಮಿ, ಅಂಕೋಲಾದಲ್ಲಿ ಮಳೆಯಾಗಿದೆ.