ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚವ್ಹಾಣ್ ಎರಡು ಪಟ್ಟಣದ ಹೆಸರನ್ನು ಇಂದು ಮರುನಾಮಕರಣಗೊಳಿಸಿದ್ದಾರೆ.
ನಸರುಲ್ಲಾಗಂಜ್ ಪಟ್ಟಣವನ್ನು ಬೈರುಂಡಾ ಎಂದು ಮರುನಾಮಕರಣ ಮಾಡಲಾಗಿದೆ. ಇತ್ತ ಹಿಶಂಗಬಾದ್ ಪಟ್ಟಣವನ್ನು ನರ್ಮದಾಪುರ ಎಂದು ಮರುನಾಮಕರಣ ಮಾಡಲಾಗಿದೆ.
ಕಳೆದ ವರ್ಷದ ಮಧ್ಯ ಪ್ರದೇಶ ಸರ್ಕಾರ ಎರಡು ಪಟ್ಟಣದ ಹೆಸರು ಬದಲಿಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿತ್ತು. ಇಂದು ಮಧ್ಯಪ್ರದೇಶ ಸರ್ಕಾರ ನೋಟಿಫಿಕೇಶನ್ ಹೊರಡಿಸಲಾಗಿದೆ. ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.
ಫೆಬ್ರವರಿ ತಿಂಗಳಲ್ಲಿ ಮಧ್ಯಪ್ರದೇಶ ಸರ್ಕಾರ ಭಾರಿ ವಿರೋಧದ ನಡುವೆ ಇಸ್ಲಾಂನಗರ ಗ್ರಾಮವನ್ನು ಜಗದೀಶಪುರ ಎಂದು ಬದಲಾಯಿಸಿತ್ತು.ಭೋಪಾಲ್ ನಗರದಿಂದ 12 ಕಿಲೋಮೀಟರ್ ದೂರದಲ್ಲಿದ್ದ ಈ ಗ್ರಾಮ 308 ವರ್ಷಗಳ ಹಿಂದೆ ಇಸ್ಲಾಂ ದಾಳಿಗೆ ಒಳಪಟ್ಟಿತ್ತು. ಹೀಗಾಗಿ ದಾಳಿ ಬಳಿಕ ಜಗದೀಶಪುರ ಎಂಬ ಹೆಸರನ್ನು ಬದಲಾಯಿಸಿ ಇಸ್ಲಾಂ ನಗರ ಎಂದು ಹೆಸರಿಡಲಾಗಿತ್ತು.
ಆಕ್ರಮಣಕಾರರ ಹೆಸರು ಇರುವ ಊರುಗಳು ಹಾಗೂ ಐತಿಹಾಸಿಕ ಸ್ಥಳಗಳ ಹೆಸರನ್ನು ಬದಲಿಸಿ ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಜಾ ವಜಾಗೊಳಿಸಿದೆ.