June 5, 2026
Friday, June 5, 2026
spot_img

ರಾಮಲಿಂಗಾರೆಡ್ಡಿ ತುಂಬಾ ಆತ್ಮೀಯರು, ಈ ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಖಾತೆ ಹಂಚಿಕೆಯ ಅಸಮಾಧಾನದಿಂದಾಗಿ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿದ್ದು, ರಾಮಲಿಂಗಾರೆಡ್ಡಿ ತುಂಬಾ ಆತ್ಮೀಯರು ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ.

ರಾಮಲಿಂಗಾರೆಡ್ಡಿ ಅವರು ನನಗೆ ತುಂಬಾ ಆತ್ಮೀಯರು. ಪಕ್ಷ ಮತ್ತು ಸರ್ಕಾರದ ಬೆಳವಣಿಗೆಯಲ್ಲಿ ಅವರ ಪಾತ್ರ ದೊಡ್ಡದಿದೆ. ಉಂಟಾಗಿರುವ ಅಸಮಾಧಾನದ ಕುರಿತು ನಾನು ಖುದ್ದಾಗಿ ಅವರ ಜೊತೆ ಕುಳಿತು ಚರ್ಚಿಸಿ, ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುತ್ತೇನೆ ಎಂದಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ಅಭಿವೃದ್ಧಿ ಖಾತೆಗೆ ಡಿಮ್ಯಾಂಡ್‌ ಇಟ್ಟಿದ್ದರು. ಆದರೆ ಹೈಕಮಾಂಡ್‌ ಅವರಿಗೆ ಜಲಸಂಪನ್ಮೂಲ ಖಾತೆ ನೀಡಿದೆ. ಇದರಿಂದ ಅಸಮಾಧಾನಗೊಂದ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದಾರೆ. ಈಗಿನ್ನೂ ಸಿಎಂ ಆಗಿರುವ ಡಿಕೆಶಿ ಎದುರು ಮೊದಲ ರಾಜಕೀಯ ಚಾಲೆಂಜ್‌ ಇದ್ದು, ಹೇಗೆ ನಿಭಾಯಿಸ್ತಾರೆ ಎಂದು ಕಾದುನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !