September 15, 2026
Tuesday, September 15, 2026
spot_img

ರಂಗೋಲಿಯಲ್ಲಿ ಸಿಎಂ ʼಡಿಕೆಶಿʼ : ಮಂಗಳೂರಿನ ಕಲಾವಿದೆ ವೀಣಾ ಐತಾಳ್‌ರಿಂದ ವಿಶೇಷ ಕಲಾಕೃತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರು ಮಂಗಳೂರಿನಲ್ಲಿ ಅಧಿವೇಶನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಕಾರಣ ಮಂಗಳೂರಿನ ರಂಗೋಲಿ ಕಲಾವಿದೆ ವೀಣಾ ಐತಾಳ್ ರವರು ಮುಖ್ಯಮಂತ್ರಿಯವರ ರಂಗೋಲಿ ಕಲಾಕೃತಿಯನ್ನು ಮಾಡಿದ್ದಾರೆ. ಈ ಕಲಾಕೃತಿಯ ಛಾಯಾಚಿತ್ರಕ್ಕೆ ಚೌಕಟ್ಟು ನಿರ್ಮಿಸಿ, ನಾಡಿದ್ದು ಇದನ್ನು ಮುಖ್ಯಮಂತ್ರಿಯವರಿಗೆ ನೀಡಲಿದ್ದಾರೆ.

ಇದರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯ ಮಂತ್ರಿಯ ಅಧಿವೇಶನ ಕಾರ್ಯಕ್ರಮದ ಸಮೀಪ 20 ಅಡಿ ಉದ್ದಗಲದ 2 ಬ್ರಹತ್ ರಂಗೋಲಿ ಕಲೆಯ ಕಲಾಕೃತಿಯನ್ನು ಮಾಡಲಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ಪ್ರತೀಕಗಳಾದ ಯಕ್ಷಗಾನ ಮತ್ತು ಕಂಬಳದ ವಿನ್ಯಾಸವನ್ನು ಈ ಕಲಾಕೃತಿಗಳಲ್ಲಿ ಮಾಡಲಿದ್ದಾರೆ.

ವೀಣಾ ಐತಾಳರು ಈಗಾಗಲೇ ಹಲವಾರು ರಂಗೋಲಿ ಕಲಾಕೃತಿಗಳನ್ನು ಅಲ್ಲಲ್ಲಿ ಮಾಡಿರುತ್ತಾರೆ. ಇವರ ರಂಗೋಲಿಯ ವಿಶೇಷವೆಂದರೆ ಕಡು ಮತ್ತು ತಿಳಿ ಬಣ್ಣವನ್ನು ಮಿಶ್ರ ಮಾಡಿ, ಆ ರಂಗೋಲಿಗೆ ಸಹಜ ಭಾವ, ನೈಜ ಜೀವ ನೀಡುವ ಪ್ರಬುದ್ಧತೆಯನ್ನು ಹೊಂದಿರುತ್ತಾರೆ. 18 ರ ಕಾರ್ಯಕ್ರಮಕ್ಕೆ ಇಂದಿನಿಂದಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಂಗೋಲಿ ಕಲಾಕೃತಿ ಮಾಡಲು ಆರಂಭಿಸಿರುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !