ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ವಿತರಣೆ ಮಾಡುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ.
ನಿತ್ಯ 60 ಲಕ್ಷದಂತೆ ವಾರಕ್ಕೆ 1.80 ಕೋಟಿ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲಾಗುತ್ತದೆ. ಬೆಳೆಯುವ ಮಕ್ಕಳಿಗೆ ಪ್ರೋಟೀನ್, ಕ್ಯಾಲ್ಶಿಯಂ ಅಗತ್ಯವಿದ್ದು, ರಾಗಿಯಲ್ಲಿ ಇದೆಲ್ಲವೂ ಇದೆ. ಈ ಕಾರಣದಿಂದ ಸರ್ಕಾರ ರಾಗಿ ಮಾಲ್ಟ್ ನೀಡಲು ನಿರ್ಧಾರ ಮಾಡಿದೆ.
ಎನ್ಜಿಒ ಕಡೆಯಿಂದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಲಾಗಿತ್ತು. ಇದು ಯಶಸ್ವಿಯಾದ ನಂತರ ಇದೀಗ ಸರ್ಕಾರ ಯೋಜನೆ ಜಾರಿ ಮಾಡಿದೆ.