ಪೊಂಗಲ್ ಹಬ್ಬದ ಸಮಯ ಜನತೆಗೆ ವಿಶೇಷ ಉಡುಗೊರೆ ಘೋಷಿಸಿದ ಸಿಎಂ ಎಂ.ಕೆ ಸ್ಟಾಲಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೊಂಗಲ್ ಹಬ್ಬದ ಸಮಯ ರಾಜ್ಯದ ಜನರಿಗೆ ₹1,000 ನಗದು ಉಡುಗೊರೆಯನ್ನು ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ.

ಜನವರಿ 15 ರಂದು ಪೊಂಗಲ್ ಆಚರಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಸಾರ್ವಜನಿಕ ಉದ್ಯೋಗಿಗಳನ್ನು ಹೊರತುಪಡಿಸಿ ಎಲ್ಲಾ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ‘ಪೊಂಗಲ್ ಉಡುಗೊರೆ’ಯಾಗಿ ಸಾವಿರ ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿಯನ್ನು ಉಲ್ಲೇಖಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಕಬ್ಬು, ತಲಾ ಒಂದು ಕೆ.ಜಿ ಅಕ್ಕಿ ಹಾಗೂ ಸಕ್ಕರೆಯನ್ನು ಒಳಗೊಂಡಿರುವ ಪೊಂಗಲ್ ಗಿಫ್ಟ್ ಹ್ಯಾಂಪರ್ ಅನ್ನು ಸರ್ಕಾರ ಈಗಾಗಲೇ ಘೋಷಿಸಿದೆ. ಪೊಂಗಲ್ ಗಿಫ್ಟ್ ಹ್ಯಾಂಪರ್ ಜತೆಗೆ ಉಚಿತ ಧೋತಿ ಮತ್ತು ಸೀರೆಗಳನ್ನು ಸಹ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

‘ಕಲೈನರ್‌ ಮಗಳಿರ್ ಉರಿಮೈ ತಿಟ್ಟಂ'(Kalaignar Magalir Urimai Thittam) ಯೋಜನೆಯಡಿ ಮಾಸಿಕವಾಗಿ ನೀಡಲಾಗುವ ₹1,000 ಅನ್ನು ಪೊಂಗಲ್ ಹಬ್ಬದ ಐದು ದಿನಗಳ ಮೊದಲು ಅಂದರೆ ಜನವರಿ 10 ರಂದು ಪಾವತಿಸಲಾಗುವುದು. ಮೊತ್ತವನ್ನು ಫಲಾನುಭವಿಗಳ ಆಯಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇದರಿಂದ ಕುಟುಂಬದ 1.15 ಕೋಟಿ ಮಹಿಳೆಯರಿಗೆ ಪ್ರಯೋಜನವಾಗಲಿದೆ ಎಂದು ಸರ್ಕಾರ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!