ಫೆ.28 ರೊಳಗೆ ‘ಕನ್ನಡ ನಾಮಫಲಕ’ ಅಳವಡಿಕೆ ಸಿಎಂ ಸೂಚನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಂಗಡಿ ಮುಂಗಟ್ಟುಗಳು ವಾಣಿಜ್ಯ ಮಳಿಗೆಗಳಲ್ಲಿ ನಾಮಫಲಕಗಳನ್ನು ಅಳವಡಿಸುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಾಯಿತು.

ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಪ್ರತಿಭಟನೆ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಸಿಡಿದೆದಿದ್ದು, ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ದಿಢೀರ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಶೇ.60ರಷ್ಟು ಕನ್ನಡದಲ್ಲಿಯೇ ಬೋರ್ಡ್​ ಇರಬೇಕು. 2024ರ ಫೆಬ್ರವರಿ 28ರೊಳಗೆ ಅಂಗಡಿಗಳ ಬೋರ್ಡ್​ ಚೇಂಜ್​ ಮಾಡಬೇಕು. ಜಾಹೀರಾತುಗಳಲ್ಲೂ ಸರ್ಕಾರದ ನಿಯಮ ಪಾಲಿಸಬೇಕು. ನಿಯಮ ಜಾರಿಗೆ ವಿಳಂಬ ಆಗಿರುವುದು ನಿಜ. ಇನ್ಮುಂದೆ ವಿಳಂಬ ಮಾಡದಂತೆ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಾಮಫಲಕಗಳು ಶೇಕಡಾ 50ರಷ್ಟು ಕನ್ನಡದಲ್ಲೇ ಇರಬೇಕು. ಬಾಕಿ ಅರ್ಧದಷ್ಟು ಬೇರೆ ಭಾಷೆಯಲ್ಲಿಯರಬೇಕು. ಈ ಬಗ್ಗೆ 2018ರಲ್ಲಿಯೇ ಕಾನೂನು ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಇದೀಗ ಶೇ.60ರಷ್ಟು ಕನ್ನಡದಲ್ಲಿಯೇ ಬೋರ್ಡ್​ ಇರಬೇಕು. ಹಿಂದಿನ ಸುತ್ತೋಲೆಯಲ್ಲಿ ಶೇ.50ರಷ್ಟು ಎಂದು ಆಗಿತ್ತು. ಹಾಗಾಗಿ ಅದಕ್ಕೆ ತಿದ್ದುಪಡಿ ತರುವುದಕ್ಕೆ ಇಂದಿನ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ 2024ರ ಫೆ.28ರೊಳಗೆ ಬೋರ್ಡ್​ ಚೇಂಜ್​ ಮಾಡಬೇಕು. ಜಾಹೀರಾತುಗಳಲ್ಲೂ ಸರ್ಕಾರದ ನಿಯಮ ಪಾಲಿಸಬೇಕು ಎಂದರು.

ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ. ಆದರೆ ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅದನ್ನು ಸರ್ಕಾರ ಸಹಿಸುವುದಿಲ್ಲ ಎಂದರು.

ನಾಪಫಲಕ ಬಗ್ಗೆ ಕರವೇ ಪ್ರತಿಭಟನೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಕರವೇಯವರು ಮನವಿ ಕೊಟ್ಟಿದ್ರೆ ಪೊಲೀಸರು ಉತ್ತರಿಸುತ್ತಿದ್ದರು. ನನಗೂ ಬಂದಿಲ್ಲ, ಗೃಹ ಸಚಿವರಿಗೂ ಮನವಿ ಬಂದಿಲ್ಲ. ಯಾವುದೇ ಮನವಿ ಕೊಡದೇ ಪ್ರತಿಭಟನೆ ಮಾಡಿದ್ದಾರೆ. ನಾವು ಯಾವಾಗಲೂ ಕನ್ನಡ ಪರ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!