ಉಕ್ರೇನ್‌ನಿಂದ ಬರುವವರನ್ನು ದೆಹಲಿಯಿಂದ ಕೇರಳಕ್ಕೆ ಕರೆತರಲು 3 ಚಾರ್ಟರ್ಡ್ ವಿಮಾನವನ್ನು ಕಳುಹಿಸಿದ ಸಿಎಂ ಪಿಣರಾಯಿ ವಿಜಯನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಇಂದು ವಿಮಾನ ಆಗಮಿಸಿದ್ದು, ಈ ಹಿನ್ನೆಲೆ ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನುಕರೆ ತರಲು ಕೇರಳ ಸರ್ಕಾರ 3 ಚಾರ್ಟರ್ಡ್ ವಿಮಾನಗಳ ವ್ಯವಸ್ಥೆ ಮಾಡಿದೆ .

ಈ ಕುರಿತು ಮಾಹಿತಿ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ಬೆಳಗ್ಗೆ 9.30ಕ್ಕೆ, ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 6.30ಕ್ಕೆ ದೆಹಲಿಯಿಂದ ಚಾರ್ಟರ್ಡ್ ವಿಮಾನಗಳು ಹೊರಡಲಿದ್ದು, ಅಲ್ಲಿಂದ ಕೊಚ್ಚಿಗೆ ಬರಲಿವೆ. ಬಳಿಕ ಅಲ್ಲಿಂದ ತಿರುವನಂತಪುರಂ ಹಾಗೂ ಕಾಸರಗೋಡಿನ ಕಡೆ ತೆರಳುವವರಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಮಾಡಿದ್ದಾರೆ.

ಇನ್ನು ಉಕ್ರೇನ್‌ನಿಂದ ಬರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮಹಿಳಾ ಅಧಿಕಾರಿಗಳು ಸೇರಿದಂತೆ ಅನಿವಾಸಿ ಕೇರಳೀಯರ ವ್ಯವಹಾರಗಳ (ನಾರ್ಕಾ) ತಂಡಗಳನ್ನು ರಾಜ್ಯದ ಎಲ್ಲಾ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!